ಅಸೀಮಾನಂದ ಜಾಮೀನಿಗೆ ತೆಲಂಗಾಣ ಸರಕಾರದಿಂದ ವಿರೋಧ

ಹೈದರಾಬಾದ್, ಮಾ. 29: 2007 ಮಕ್ಕಮಸೀದಿ ಸ್ಫೋಟ ಪ್ರಕರಣದ ಆರೋಪಿ ಅಸೀಮಾನಂದಗೆ ಜಾಮೀನು ರದ್ದು ಮಾಡಲು ತೆಲಂಗಾಣ ಸರಕಾರ ಎಲ್ಲ ಪ್ರಯತ್ನಗಳನ್ನು ನಡೆಸಲಿದೆ ಎಂದು ಗೃಹ ಸಚಿವ ನರಸಿಂಹ ರೆಡ್ಡಿ ವಿಧಾನ ಸಭೆಯಲ್ಲಿ ನಿನ್ನೆ ತಿಳಿಸಿದ್ದಾರೆ.
ಅವರು ಎಂಐಎಂ ಶಾಸಕ ಅಕ್ಬರುದ್ದೀನ್ ಉವೈಸಿಯವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು. ಕಳೆದವಾರ ಹೈದರಾಬಾದ್ ಕೋರ್ಟು ಅಸೀಮಾನಂದ ಮತ್ತು ಸಹಾರೋಪಿ ಭರತ್‌ಭಾಯಿಗೂ ಜಾಮೀನು ನೀಡಿತ್ತು. ಭರತ್‌ಭಾಯಿ ಜೈಲಿನಿಂದ ಹೊರಬಂದಿದ್ದಾರೆ. ಅಸೀಮಾನಂದ ಕಾನೂನು ವಿಧಿವಿಧಾನಗಳು ಪೂರ್ಣಗೊಳ್ಳದ್ದರಿಂದ ಜೈಲಿನಲ್ಲೇ ಉಳಿದಿದ್ದಾರೆ. ಅಂಬಾಲದಲ್ಲಿ ಇನ್ನೊಂದು ಪ್ರಕರಣದಲ್ಲಿ ಹಾಜರಾಗುವುದಕ್ಕೆ ಅಸೀಮಾನಂದರಿಗೆ ಕೋರ್ಟು ನೋಟಿಸು ನೀಡಿದೆ.
Next Story