ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಕ್ರಿಕೆಟ್ ತಂಡದ ಟೀ-ಶರ್ಟ್ ಅನಾವರಣ
ದೋಹ, ಮಾ.29: ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಕ್ರಿಕೆಟ್ ತಂಡದ ನೂತನ ಟೀ-ಶರ್ಟ್ ಅನಾವರಣ ಕಾರ್ಯಕ್ರಮವು ದೋಹಾ ವಾನೂ ಇವೆಂಟ್ ಮ್ಯಾನೇಜ್ಮೆಂಟ್ ಗ್ರೂಪ್ ಕಚೇರಿಯಲ್ಲಿ ನಡೆಯಿತು.
ವಾನೂ ಇವೆಂಟ್ ಮ್ಯಾನೇಜ್ಮೆಂಟ್ ಗ್ರೂಪ್, ಗ್ರೀನ್ ಸ್ಟಾರ್ ಗ್ರೂಪ್ ಮತ್ತು ಹನ್ನಾನ್ ಕ್ಲಬ್ ನ ವ್ಯವಸ್ಥಾಪಕ ಖಾದರ್ ರವರು ತಂಡದ ಟೀ-ಶರ್ಟ್ ಅನ್ನು ಅನಾವರಣಗೊಳಿಸಿದರು.
ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಘಟಕದ ಅಧ್ಯಕ್ಷ ನಝೀರ್ ಪಾಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕತಾರ್ ಇಂಡಿಯನ್ ಫ್ರಟೆರ್ನಿಟಿ ಫೋರಮ್ ನ ಪ್ರಧಾನ ಕಾರ್ಯದರ್ಶಿ ಸಲೀಂ ರಹ್ಮಾನ್ ಬಂಗಾಡಿ, ಇಂಡಿಯನ್ ಸೋಶಿಯಲ್ ಫೋರಮ್ ಕ್ರಿಕೆಟ್ ತಂಡದ ನಾಯಕ ಆರಿಫ್ ಅಕ್ಕರಂಗಡಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
Next Story