ಸೂರ್ಯನಮಸ್ಕಾರ ಹಾಗೂ ನಮಾಝ್ ಗೆ ಹೋಲಿಕೆಯಿದೆ: ಆದಿತ್ಯನಾಥ್

ಲಕ್ನೊ,ಮಾ. 30: ಸೂರ್ಯನಮಸ್ಕಾರ ಹಾಗು ಮುಸ್ಲಿಮರ ನಮಾಝ್ ಗೆ ಹೋಲಿಕೆಯಿದೆ. ಅದನ್ನು ವಿರೋಧಿಸುವವರು ಸಮಾಜದಲ್ಲಿ ಕೋಮು ವರ್ಗೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಸೂರ್ಯನಿಗೆ ಶಿರಬಾಗುವುದು ಧಾರ್ಮಿಕ ಸೌಹಾರ್ದದ ಉದಾತ್ತ ಮಾದರಿಯಾಗಿದೆ. ಪ್ರಾಣಯಾಮ ಸಹಿತ ಸೂರ್ಯನಮಸ್ಕಾರದ ಬೇರೆ ಬೇರೆ ಪಟ್ಟುಗಳು , ಆಸನಗಳು ಮುಸ್ಲಿಮರ ನಮಾಝ್ ಗೆ ಸಮಾನವಾದುದು. ಮುಸ್ಲಿಂಸಹೋದರರ ನಮಾಝ್ ಮತ್ತು ಸೂರ್ಯನಮಸ್ಕಾರ ಸಮಾನವಾಗಿದ್ದರೂ ಯಾರೂ ಇದನ್ನು ಒಗ್ಗೂಡಿಸಿ ತರಲು ಶ್ರಮಿಸಿಲ್ಲ ಎಂದು ಮೂರು ದಿವಸಗಳಕಾಲ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಯೋಗ ಮಹೋತ್ಸವವನ್ನು ಉದ್ಘಾಟಿಸಿ ಆದಿತ್ಯನಾಥ್ ಹೇಳಿದರು.
2014ಕ್ಕಿಂತ ಹಿಂದೆಲ್ಲ ಯೋಗದ ಕುರಿತು ಮಾತಾಡುವುದು ಕೋಮುವಾದವಾಗಿತ್ತು. ಆದರೆ ಯೋಗವನ್ನು ಜನಪ್ರಿಯ ಗೊಳಿಸಲು ಮೋದಿ ಮುಂದೆ ಬರುವುದರೊಂದಿಗೆ ಪರಿಸ್ಥಿತಿ ಬದಲಾಯಿತು ಎಂದು ಆದಿತ್ಯನಾಥ್ ಹೇಳಿದ್ದಾರೆ.
Next Story