Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೇಶದ ಅತ್ಯಂತ ಎತ್ತರದ ತ್ರಿವರ್ಣ...

ದೇಶದ ಅತ್ಯಂತ ಎತ್ತರದ ತ್ರಿವರ್ಣ ಧ್ವಜಕ್ಕೆ ಎದುರಾಗಿದೆ ಗಂಭೀರ ಸಮಸ್ಯೆ

ವಾರ್ತಾಭಾರತಿವಾರ್ತಾಭಾರತಿ30 March 2017 1:32 PM IST
share
ದೇಶದ ಅತ್ಯಂತ ಎತ್ತರದ ತ್ರಿವರ್ಣ ಧ್ವಜಕ್ಕೆ ಎದುರಾಗಿದೆ ಗಂಭೀರ ಸಮಸ್ಯೆ

ಹೊಸದಿಲ್ಲಿ, ಮಾ.30: ಭಾರತ-ಪಾಕ್ ಗಡಿ ಸಮೀಪ ಹಾರಾಡುತ್ತಿರುವ ದೇಶದ ಅತ್ಯಂತ ಎತ್ತರದ ತ್ರಿವರ್ಣ ಧ್ವಜಕ್ಕೆ ಗಂಭೀರ ಸಮಸ್ಯೆ ಎದುರಾಗಿದ್ದು ಹಲವರ ಮುಖ ಕೆಂಪಾಗಿಸಿದೆ. ಈ ಅತ್ಯಂತ ಎತ್ತರದ ಧ್ವಜಕ್ಕೆ ಅಲ್ಲಿನ ವಾತಾವರಣ ಅನುಕೂಲಕರವಾಗಿಲ್ಲವೆನಿಸುತ್ತದೆ. ಅಲ್ಲಿ ಬೀಸುವ ತೀವ್ರ ಗಾಳಿಯಿಂದ ಈ ಧ್ವಜ ಆಗಾಗ ಹರಿದು ಹೋಗುತ್ತಿದ್ದು ಕಳೆದ ತಿಂಗಳು ಧ್ವಜ ಏರಿಸಿದ ನಂತರ ಇಲ್ಲಿಯವರೆಗೆ ಧ್ವಜವನ್ನು ನಾಲ್ಕು ಬಾರಿ ಬದಲಾಯಿಸಲಾಗಿದೆ.

ಬಹಳಷ್ಟು ಪ್ರಚಾರ ಗಿಟ್ಟಿಸಿ ಈ ಧ್ವಜವನ್ನು ಅತ್ಯಂತ ಎತ್ತರದ ಧ್ವಜಸ್ಥಂಭದಲ್ಲಿ ಹಾರಿಸಲಾಗಿದ್ದರೆ, ಇದೀಗ ಈ ಧ್ವಜ ಆಗಾಗ ಹರಿಯುತ್ತಿರುವುದರಿಂದ ಅದು ದೇಶದ ಗೌರವಕ್ಕೆ ಧಕ್ಕೆ ತಂದಿದೆಯಲ್ಲದೆ ಹಣವೂ ಅನಗತ್ಯ ಖರ್ಚಾಗುತ್ತಿದೆ ಎಂದು ಅಧಿಕಾರಿಗಳು ಹೇಳಲಾರಂಭಿಸಿದ್ದಾರೆ. 106 ಮೀಟರ್ (350 ಅಡಿ) ಎತ್ತರದಲ್ಲಿರುವ ಈ ಧ್ವಜವಿರುವ ಪ್ರದೇಶಕ್ಕಿಂತ 20 ಕಿಮೀ ದೂರವಿರುವ ಲಾಹೋರ್ ನಗರದಿಂದಲೂ ಅದು ಕಾಣಿಸುತ್ತದೆ. ಆದರೆ ಈಗ ಈ ಭಾರತದ ಧ್ವಜ ಆಗಾಗ ಹರಿದು ಹೋಗುತ್ತಿದೆಯೆಂದು ತಿಳಿದು ಪಾಕಿಸ್ತಾನೀಯರು ಒಳಗೊಳಗೇ ಸಂತಸ ಪಡುತ್ತಿರಬಹುದು.

ರಾಷ್ಟ್ರಧ್ವಜ ಹರಿದು ಹೋಗಿದ್ದರೆ ಅದನ್ನು ಹಾಗೆಯೇ ಹಾರಲು ಬಿಡುವುದು ದೇಶದ ಕಾನೂನಿನಂತೆ ಅಪರಾಧ. ಅಂತೆಯೇ ಅದನ್ನು ಮತ್ತೆ ಕೆಳಗಿಳಿಸಿ ಬೇರೊಂದು ಹೊಸ ಧ್ವಜ ಅಳವಡಿಸುವುದೂ ಬಹಳ ಶ್ರಮದಾಯಕ ಕೆಲಸವಾಗಿ ಬಿಟ್ಟಿದೆ. ನಿಜ ಹೇಳಬೇಕೆಂದರೆ ಇಷ್ಟೊಂದು ಎತ್ತರದಲ್ಲಿ ಧ್ವಜಸ್ಥಂಭ ಅಳವಡಿಸುವ ಮುಂಚೆ ಅಲ್ಲಿನ ಹವಾಮಾನ ಪರಿಸ್ಥಿತಿಯನ್ನು ಅಧಿಕಾರಿಗಳು ಅವಲೋಕಿಸುವ ಗೋಜಿಗೇ ಹೋಗಿರಲಿಲ್ಲ. ಇಂತಹ ಎತ್ತರದ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿರುದ್ಧ ತಾನು ಸಲಹೆ ನೀಡಿದ್ದಾಗಿ ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ ಅಧ್ಯಕ್ಷ ಕೆ ವಿ ಸಿಂಗ್ ಹೇಳಿದ್ದಾರೆ. ‘‘ನಾವು ಸಣ್ಣ ಧ್ವಜ ಹಾರಿಸುವಂತೆ ಹೇಳಿದ್ದೆವು. ಆದರೆ ಧ್ವಜ ಪಾಕಿಸ್ತಾನದ ಲಾಹೋರ್ ನಗರದಲ್ಲೂ ಕಾಣಿಸಬೇಕೆಂಬ ಉದ್ದೇಶದಿಂದ ಎತ್ತರದಲ್ಲಿ ಹರಿಸಲಾಗಿತ್ತು,’’ ಎಂದು ಅವರು ಹೇಳುತ್ತಾರೆ.

ಹೈದರಾಬಾದ್ ನಗರದಲ್ಲಿರುವ 455 ವರ್ಷ ಹಳೆಯದಾದ ಹುಸೈನ್ ಸಾಗರ್ ಕೆರೆ ಸಮೀಪವಿರುವ 88 ಮೀಟರ್ ಎತ್ತರದ ರಾಷ್ಟ್ರಧ್ವಜ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ದೆಹಲಿಯಲ್ಲಿರುವ 63 ಮೀಟರ್ ಎತ್ತರದ ರಾಷ್ಟ್ರಧ್ವಜ ಕಳೆದ ಮೇ ಹಾಗೂ ಜೂನ್ ತಿಂಗಳುಗಳಲ್ಲಿ ಒಟ್ಟು 11 ಬಾರಿ ಹರಿದಿದೆಯೆಂದು ಸಿಂಗ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X