ವಿಷಾನಿಲ ಸೇವನೆ:ಐವರು ಕಾರ್ಮಿಕರ ಸಾವು

ಅಮರಾವತಿ,ಮಾ.30:ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತುರು ಪಟ್ಟಣದ ಸಮುದ್ರ ಆಹಾರ ಸಂಸ್ಕರಣೆ ಘಟಕವೊಂದರಲ್ಲಿ ವಿಷಾನಿಲ ಸೇವನೆಯಿಂದ ಐವರು ಕಾರ್ಮಿಕರು ಸಾವನ್ನಪ್ಪಿದ ದುರಂತ ಗುರುವಾರ ಬೆಳಿಗ್ಗೆ ಸಂಭವಿಸಿದೆ.
21ರಿಂದ 25ವರ್ಷ ಪ್ರಾಯದ ಈ ಕಾರ್ಮಿಕರು ಆನಂದ ಅಕ್ವಾ ಫುಡ್ ಪ್ರಾಸೆಸಿಂಗ್‌ನಿಂದ ಸುಮಾರು ನೂರು ಮೀಟರ್ ಅಂತರದಲ್ಲಿರುವ ರಾಸಾಯನಿಕ ತುಂಬಿದ್ದ ಟ್ಯಾಂಕೊಂದನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ನಡೆದಿದೆ. ಅವರ ಸಾವಿಗೆ ಕಾರಣವಾಗಿರುವ ವಿಷಾನಿಲ ಅಮೋನಿಯಾ ಆಗಿರಬಹುದೆಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಮೃತರು ಆಸುಪಾಸಿನ ಗ್ರಾಮಗಳ ನಿವಾಸಿಗಳಾಗಿದ್ದಾರೆ.
ಜಿಲ್ಲಾಧಿಕಾರಿ ಕೆ.ಭಾಸ್ಕರ ಅವರಿಂದ ದುರಂತದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ.
Next Story