ಮಹಿಳೆಯಾದ್ದರಿಂದ ನನ್ನತಾಯಿಗೆ ಭಾರತದಲ್ಲಿ ನ್ಯಾಯಾಧೀಶೆ ಆಗಲು ಸಾಧ್ಯವಾಗಲಿಲ್ಲ: ನಿಕ್ಕಿ ಹ್ಯಾಲಿ
.jpg)
ವಾಷಿಂಗ್ಟನ್, ಮಾ. 30: ಮಹಿಳೆಯೆನ್ನುವ ಕಾರಣದಿಂದ ತನ್ನ ತಾಯಿಗೆ ಭಾರತದಲ್ಲಿ ನ್ಯಾಯಾಧೀಶೆ ಆಗಲು ಸಾಧ್ಯವಾಗಿಲ್ಲ ಎಂದು ಅಮೆರಿಕದ ಗವರ್ನರ್, ವಿಶ್ವಸಂಸ್ಥೆಯ ಅಮೆರಿಕದ ಪ್ರತಿನಿಧಿ ನಿಕ್ಕಿಹ್ಯಾಲಿ ಹೇಳಿದ್ದಾರೆ. ವಿದೇಶ ವಿಷಯಗಳ ಸಮಿತಿಯ ಸಭೆಯಲ್ಲಿ ಸಮಾಜದಲ್ಲಿ ಮಹಿಳೆಯ ಸ್ಥಾನಮಾನ ಎನ್ನುವ ವಿಷಯದಲ್ಲಿ ಅವರು ಮಾತಾಡುತ್ತಿದ್ದರು.
ಭಾರತದಲ್ಲಿ ಶಿಕ್ಷಣಕ್ಷೇತ್ರ ಹೆಚ್ಚು ಮಿತಿಗಳನ್ನು ಎದುರಿಸುತ್ತಿದ್ದ ಕಾಲದಲ್ಲಿ ತನ್ನ ಅಮ್ಮನಿಗೆ ಕಾನೂನು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಎನ್ನುವವರೆಗೂ ಅವರನ್ನು ಪರಿಗಣಿಸಲಾಗುತ್ತಿತ್ತು. ಆದರೆ ಮಹಿಳೆಯರ ಕುರಿತುಅಲ್ಲಿನ ಪರಿಸ್ಥಿತಿಯಿಂದಾಗಿ ನ್ಯಾಯಾಧೀಶೆ ಆಗುವ ಅವಕಾಶವನ್ನು ಅವರಿಗೆನಿರಾಕರಿಸಲಾಯಿತು. ಆದರೆ, ಇದೇ ಅಮ್ಮನಿಗೆ ಇಂದು ತನ್ನ ಮಗಳು ಸೌತ್‌ಕೆರೊಲಿನಾದ ಗವರ್ನರ್‌ಮತ್ತುಅಮೆರಿಕದ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿರುವ ಆಶ್ಚರ್ಯಕ್ಕೆ ಸಾಕ್ಷಿಯಾಗಲು ಸಾಧ್ಯವಾಯಿತು ಎಂದು ನಿಕ್ಕಿ ಹ್ಯಾಲೆ ಹೇಳಿದರು.
1960ರಲ್ಲಿ ಭಾರತದಿಂದ ಅಮೆರಿಕಕ್ಕೆ ನಿಕ್ಕಿಹ್ಯಾಲಿಯ ಹೆತ್ತವರಾದ, ಅಜಿತ್‌ಸಿಂಗ್, ರಾಜ್‌ಕೌರ್ ವಲಸೆ ಹೋಗಿದ್ದರು. ಆದರೆ ಅರಸರ ಆಡಳಿತ ಕಾಲದಲ್ಲಿ ತಿರವಿತಾಂಕೂರ್‌ನಲ್ಲಿ ಅನ್ನಾ ಚಾಂಡಿ ಓರ್ವ ಮಹಿಳಾ ಜಡ್ಜ್ ಇದ್ದರು. 1948ರಲ್ಲಿ ಜಿಲ್ಲಾ ಜಡ್ಜ್ ಮತ್ತು ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹೈಕೋರ್ಟು ಜಡ್ಜ್ ಕೂಡಾ ಆಗಿದ್ದರು. ಹ್ಯಾಲೆಯ ಹೆತ್ತವರು ಭಾರತದಿಂದ ಅಮೆರಿಕಕ್ಕೆ ಹೋಗುವುದಕ್ಕಿಂತ ಮುಂಚೆಯೇ ಅನ್ನಾ ಚಾಂಡಿ ಜಡ್ಜ್ ಸ್ಥಾನವನ್ನು ಅಲಂಕರಿಸಿದ್ದರು.





