ಸಾಕು ನಾಯಿಗಳಿಗೆ ಲೈಸೆನ್ಸ್ ಕಡ್ಡಾಯ!

ಮಂಗಳೂರು, ಮಾ. 30: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಸಾಕು ನಾಯಿಗಳಿಗೆ ಪ್ರಸಕ್ತ ಸಾಲಿನಿಂದ (2017-18)ರಿಂದ ಜಾರಿಯಾಗುವಂತೆ ‘ಡಾಗ್ ಲೈಸೆನ್ಸ್’ ಕಡ್ಡಾಯಗೊಳಿಸಲಾಗಿದೆ. ಅದರಂತೆ ಪ್ರಥಮ ವರ್ಷದಲ್ಲಿ ಉಚಿತವಾಗಿ ಪರವಾನಿಗೆ ಪಡೆಯಬಹುದಾಗಿದ್ದು, ಮುಂದಿನ ಸಾಲಿನಿಂದ ಶುಲ್ಕ ಪಾವತಿಸಿ ಪರವಾನಿಗೆಯನ್ನು ನವೀಕರಣ ಮಾಡಬೇಕಾಗಿರುತ್ತದೆ.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಂದು ಈ ಕುರಿತಾದ ನಿರ್ಣಯವನ್ನು ಅಂಗೀಕರಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಉಚಿತವಾಗಿ ಪರವಾನಿಗೆಯನ್ನು ಪಡೆಯಬಹುದಾಗಿದ್ದು, ಬಳಿಕ ಪ್ರತಿ ವರ್ಷ ರೂ. 300 ರೂ. ಶುಲ್ಕ ತೆತ್ತು ಪರವಾನಿಗೆಯನ್ನು ನವೀಕರಿಸಬೇಕೆಂಬ ನಿರ್ಣಯವನ್ನು ಪಾಲಿಕೆ ಸಮ್ಮತಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆಯನ್ನು ನಿವಾಗಿಸುವುದು, ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸುವ ನಿಟ್ಟಿನಲ್ಲಿ 2016ರ ಮಾರ್ಚ್ 31ರಲ್ಲಿ ಡಾಗ್ ವೆಲೆಓಂೀರ್ ಸಮಿತಿ ಹಾಗೂ ಡಾಗ್ ಲೈಸೆನ್ಸ್ ಸಮಿತಿಯನ್ನು ರಚನೆ ಮಾಡಲು ನಿರ್ಣಯಿಸಲಾಗಿತ್ತು.
ಬೀದಿ ನಾಯಿ ಹಾಗೂ ಸಾಕು ನಾಯಿಗಳ ಸರ್ವೆ ಮಾಡಿ ಸಾಕು ನಾಯಿಗಲಿಗೆ ಸಂತಾನಹರಣ ಶಸ ಚಿಕಿತ್ಸೆ ಮಾಡಿಸುವುದು ಈ ಸಮಿತಿಯ ಕಾರ್ಯವಾಗಿದೆ. ಈ ಬಗ್ಗೆ 2017ರ ೆ. 10ರಂದು ಪಾಲಿಕೆ ಸಮಿತಿ ಸಭಾಂಗಣದಲ್ಲಿ ಡಾಗ್ ವೆಲೆಓಂೀರ್ ಸಮಿತಿ ಸಭೆಯನ್ನು ಆಯುಕ್ತರು ನಡೆಸಿದ್ದರು. ಸಭೆಯಲ್ಲಿ ಕೆಲವೊಂದು ಷರತ್ತುಗಳನ್ನು ನಿಗದಿಪಡಿಸಲಾಗಿದ್ದು, ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅದಕ್ಕೆ ಅನುಮೋದನೆ ನೀಡಲಾಯಿತು.
ಷರತ್ತುಗಳು
► ಪಾಲಿಕೆಯಲ್ಲಿ ಎಲ್ಲಾ ಸಾಕುನಾಯಿಗಳಿಗೆ ಪರವಾನಿಗೆ ಕಡ್ಡಾಯ.
► ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ ಮಾಲಕರು ತಮ್ಮ ಸಾಕುನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿರುವ ದಾಖಲೆಯ ಪ್ರತಿಯನ್ನು ಒದಗಿಸಬೇಕು.
► ಪರವಾನಿಗೆ ಅವದಿ ಒಂದು ವರ್ಷ. ಪ್ರತಿ ವರ್ಷ ನವೀಕರಣ ಮಾಡತಕ್ಕದ್ದು.
► ಸಾಕು ನಾಯಿಗಳ ಪಾಲಕರು ಪ್ರಾಣಿಗಳ ಕೌರ್ಯತಡೆ (ಡಾಗ್ ನಿಯಮಗಳು 2001)ರಂತೆ ಅಥವಾ ಸರಕಾರದಿಂದ ಹೊರಡಿಸುವ ನಿರ್ದೇಶನಗಳನ್ನು ಪಾಲಿಸತಕ್ಕದ್ದು.







