ಹೈಕೋರ್ಟಿನ 7ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ 78ವರ್ಷದ ವೃದ್ಧ
ಕೊಚ್ಚಿ, ಮಾ.30: ಕೇರಳ ಹೈಕೋರ್ಟಿನ ಏಳನೆ ಮಹಡಿಯಿಂದ 78ವರ್ಷ ವೃದ್ಧ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲ್ಲಂನ ಕಡಪ್ಪಾಕ್ಕಡ ಎಂಬಲ್ಲಿನ ಕೆ.ಎಂ.ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಹಡಿಯಿಂದ ನೆಲಕ್ಕೆ ಬಿದ್ದ ಕೂಡಲೇ ಜಾನ್ಸನ್ ಮೃತಪಟ್ಟಿದ್ದಾರೆ.ನ್ಯಾಯಾಲಯಕ್ಕೆ ಬಂದ ವ್ಯಕ್ತಿಯಾಗಿರಬೇಕೆಂದು ಶಂಕಿಸಲಾಗಿದೆ.ಕೇಸಿನಲ್ಲಿ ಸೋಲಾದದ್ದೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.
Next Story