90ವರ್ಷದ ವೃದ್ಧೆಯ ಅತ್ಯಾಚಾರ: ಆರೋಗ್ಯ ಸ್ಥಿತಿ ಗಂಭೀರ, ಓರ್ವ ಶಂಕಿತನ ಸೆರೆ!

ಕೇರಳ,ಮಾ. 30: ಮಾವೇಲಿಕರ ಎಂಬಲ್ಲಿ 90ವರ್ಷ ವಯಸ್ಸಿನ ವೃದ್ಧೆಯನ್ನು ದುಷ್ಕರ್ಮಿಗಳು ಅತ್ಯಾಚಾರಕ್ಕೊಳಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಓರ್ವನನ್ನು ಕಸ್ಟಡಿಗೆ ಪಡೆದಿದ್ದಾರೆ.ಮಕ್ಕಳು ಸಮೀಪದ ದೇವಾಲಯದ ಜಾತ್ರೆಗೆ ಹೋಗಿದ್ದ ಸಮಯದಲ್ಲಿ ಅತಿಹೇಯ ಘಟನೆ ನಡೆದಿದೆ.
ಜಾತ್ರೆ ಮುಗಿಸಿ ಬೆಳಗ್ಗಿನ ವೇಳೆ ಮಕ್ಕಳು ಮನೆಗೆ ಬಂದಾಗ ಮುಖ ಮತ್ತು ಗುಪ್ತಾಂಗದಲ್ಲಿ ಗಾಯವಾಗಿದ್ದ ಸ್ಥಿತಿಯಲ್ಲಿ ವೃದ್ಧೆ ಕಂಡು ಬಂದಿದ್ದರು.ಕೂಡಲೇ ಅವರನ್ನು ಮಾವೇಲಿಕರ ತಾಲೂಕುಆಸ್ಪತ್ರೆಗೆ ಸೇರಿಸಲಾಯಿತು.ವೃದ್ಧೆಯ ಆರೋಗ್ಯಸ್ಥಿತಿ ತೀರಾಚಿಂತಾಜನಕವಾಗಿದ್ದರಿಂದ ಆಲಪ್ಪುಝ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಗಂಭೀರ ಆರೋಗ್ಯಸ್ಥಿತಿಯ ಕಾರಣದಿಂದ ಪೊಲೀಸರಿಗೂ ವೃದ್ಧ ಮಹಿಳೆಯಿಂದ ಹೇಳಿಕೆ ಪಡೆಯಲುಸಾಧ್ಯವಾಗಿಲ್ಲ. ಘಟನೆಗೆ ಸಂಬಂಧಿಸಿ ಒಬ್ಬನನ್ನುಕಸ್ಟಡಿಗೆ ಪಡೆಯಲಾಗಿದೆ.ಈತನ ಕೈಯಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.ಆದರೆ ಆರೋಪಿ ಮೋಬೈಲ್‌ಫೋನ್ ತನ್ನದಲ್ಲ ಗೆಳೆಯನದ್ದೆಂದು ಪೊಲೀಸರಿಗೆ ತಿಳಿಸಿದ್ದಾನೆ.
Next Story