ಅಮೆರಿಕ ವೀಸಾ ಇರುವ ಭಾರತೀಯರಿಗೆ ಯುಎಇಯಲ್ಲಿ ಆನ್ ಅರೈವಲ್ ವೀಸಾ
.jpg)
ಅಬುಧಾಬಿ, ಮಾ. 30: ಅಮೆರಿಕ ವೀಸಾ ಅಥವಾ ಗ್ರೀನ್ ಕಾರ್ಡ್ ಇರುವ ಭಾರತೀಯರಿಗೆ ಆನ್ ಅರೈವಲ್ ವೀಸಾ ನೀಡುವ ನಿರ್ಧಾರಕ್ಕೆ ಯುಎಇ ಸಚಿವಸಂಪುಟ ಸಭೆ ಅಂಗೀಕಾರ ನೀಡಿದೆ. ಕನಿಷ್ಠ ಆರು ತಿಂಗಳ ಅಮೆರಿಕ ವೀಸಾ, ಗ್ರೀನ್ ಕಾರ್ಡ್ ಇರುವ ಭಾರತೀಯರು ಯಾವ ಮಾರ್ಗದ ಮೂಲಕವೂ ಆನ್ ಅರೈವಲ್ ವೀಸಾ ಉಪಯೋಗಿಸಿ ಯುಎಇ ಪ್ರವೇಶಿಸಬಹುದಾಗಿದೆ. ಹದಿನಾಲ್ಕುದಿವಸ ಸಮಯ ಈ ವೀಸಾಕ್ಕಿದೆ. ಜೊತೆಗೆ ಇನ್ನೂ ಹದಿನಾಲ್ಕು ದಿವಸಕ್ಕೆ ನವೀಕರಣ ಗೊಳಿಸಬಹುದು. ಹೀಗೆ ಅವರಿಗೆ ಒಟ್ಟು 28 ದಿವಸಗಳ ಕಾಲ ಯುಎಇಯಲ್ಲಿ ವಾಸಿಸಲು ಸಾಧ್ಯವಿದೆ. ಇದು ಭಾರತ ಮತ್ತು ಯುಎಇ ನಡುವಿನ ರಾಜಕೀಯ, ಆರ್ಥಿಕ, ವಾಣಿಜ್ಯ ಹಿತಾಸಕ್ತಿಯನ್ನುಪ್ರೋತ್ಸಾಹಿಸುವ ಪ್ರಯುಕ್ತ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಯುಎಇಯ ಅತಿದೊಡ್ಡ ಎರಡನೆ ವ್ಯಾಪಾರಿ ಪಾಲ್ದಾರರಾಷ್ಟ್ರ ಭಾರತ ಆಗಿದೆ. ಪರಸ್ಪರ ಅವರೆಡರ ನಡುವೆ ವಾರ್ಷಿಕ 389,220 ಕೋಟಿ ರೂಪಾಯಿ ವಹಿವಾಟು ಆಗುತ್ತಿದೆ. ಯುಎಇ ಭಾರತಕ್ಕೆ 175,149 ಕೋಟಿ ರೂಪಾಯಿ ಉತ್ಪನ್ನ ರಫ್ತು ಮಾಡುತ್ತಿದೆ. ಭಾರತ ಯುಎಇಗೆ 214,071 ಕೋಟಿ ರೂಪಾಯಿ ಉತ್ಪನ್ನ ರಫ್ತುಮಾಡುತ್ತಿದೆ.
ಎರಡು ದೇಶಗಳ ನಗರಗಳಿಗೆ ಪ್ರತಿದಿವಸ 143 ರಷ್ಟು ವಿಮಾನಗಳು ಸೇವೆ ನಡೆಸುತ್ತಿವೆ. ವಾರದಲ್ಲಿ 1000 ವಿಮಾನ ಹಾರಾಟಗಳು ನಡೆಯುತ್ತಿವೆ. ಪ್ರತಿ ಹತ್ತು ನಿಮಿಷಕ್ಕೆ ಒಂದು ವಿಮಾನ ಹಾರಾಟ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿದೆ. ಈವರ್ಷ ಈವರೆಗೆ 50,000 ಭಾರತೀಯ ಪ್ರವಾಸಿಗರು ಯುಎಇ ಸಂದರ್ಶಿಸಿದ್ದಾರೆ.





