ಅಹ್ಸನಿ ಸಖಾಫಿ ಸಂಗಮ

ಮಂಗಳೂರು, ಮಾ. 30: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ಹಾಗೂ ಎಸ್‌ಕೆಎಸೆಸೆಫ್ ಕಿನ್ಯ ಶಾಖೆ ಇದರ ಅಧೀನದಲ್ಲಿ ಅಹ್ಸನಿ ಸಖಾಫಿ ಸಂಗಮ ಕಿನ್ಯ ಬೆಳರಿಂಗೆಯ ಝೈನುಲ್ ಉಲಮಾ ನಗರದಲ್ಲಿ ನಡೆಯಿತು.
ಕಿನ್ಯ ಜಮಾಅತ್ ಅಧ್ಯಕ್ಷ ಕೆ.ಎಚ್.ಹುಸೈನ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾ ಮಸೀದಿಯ ಖತೀಬ್ ಮುಹಮ್ಮದ್ ಶಮೀಮ್ ಸಖಾಫಿ ಉದ್ಘಾಟಿಸಿದರು. ಸಯ್ಯದ್ ಅಮೀರ್ ತಂಙಳ್ ಕಿನ್ಯ ದುಆ ಆಶೀರ್ವಚನ ನೀಡಿದರು. ಸಯ್ಯದ್ ಬಾತಿಷ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಜಿ ಹಾರೂನ್ ಅಹ್ಸನಿ ಮುದರ್ರಿಸ್ ಕೋಟೆಕಾರ್ ಮಾತನಾಡಿದರು.
ಹಾಜಿ ಅಬ್ದುಸಮದ್ ಪೂಕೋಟೂರು, ಹಾಫಿಝ್ ಝೈನುಲ್ ಆಬಿದೀನ್ ಸಖಾಫಿ ಉಳ್ಳಾಲ ಮುಖ್ಯ ಪ್ರಭಾಷಣ ಮಾಡಿದರು. ಕೆ. ಆರ್. ಹುಸೈನ್ ದಾರಿಮಿ, ಕೆ. ಎಲ್. ಉಮರ್ ದಾರಿಮಿ, ಖಾಸಿಂ ದಾರಿಮಿ, ಕುಕ್ಕಿಲ ದಾರಿಮಿ, ಎಸ್.ಬಿ. ಮುಹಮ್ಮದ್ ದಾರಿಮಿ, ಬದ್ರುದ್ದೀನ್ ತಂಙಳ್ ಮಂಜೇಶ್ವರ, ಅಬೂಬಕರ್ ಸಿದ್ದೀಕ್ ಅಹ್ಸನಿ, ಹುಸೈನ್ ಇರ್ಷಾದ್ ಸಖಾಫಿ ಉಳ್ಳಾಲ, ಇಬ್ರಾಹೀಂ ಖಲೀಲ್ ಅಮ್‌ಜದಿ ಸಾಲೆತ್ತೂರ್, ಇಕ್ಬಾಲ್ ಝಹ್‌ರಿ ಮಾಡೂರು, ಅಬ್ದುಲ್ ಖಾದರ್ ಪಯಾಝ್ ನಯೀಮಿ, ಮುಹಮ್ಮದ್ ಹಾಫಿಲ್ ನಯೀಮಿ, ಇಕ್ಬಾಲ್ ಮುಸ್ಲಿಯಾರ್, ಪಾತೂರ್ ಉಸ್ತಾದ್, ಇಬ್ರಾಹಿಂ ಬಾಖವಿ, ಕೆ. ಸಿ. ರೋಡ್, ಎಂ. ಕೆ. ಜುನೈದ್ ಮುಸ್ಲಿಯಾರ್ ಉಳ್ಳಾಲ, ಹನೀಫ್ ಫೈಝಿ ಪರಪು, ಲತೀಫ್ ಹಾಜಿ ಮದರ್‌ಇಂಡಿಯಾ, ಉಸ್ಮಾನ್ ಹಾಜಿ ಏರ್‌ಇಂಡಿಯಾ, ಕುಂಞಿ ಹಾಜಿ ಕಿನ್ಯ, ಕೆ. ಶೇಕಬ್ಬ ಹಾಜಿ ಕಿನ್ಯ, ಟಿ. ಎಂ. ಮುಹಮ್ಮದ್, ಸಿತಾರ್ ಮಜೀದ್ ಹಾಜಿ, ನಸೀಮ ಅಬ್ದುರ್ರಹ್ಮಾನ್ ಹಾಜಿ, ಸೀಝರ್ ಹಾಜಿ, ಮುಹಮ್ಮದ್ ಹಾಜಿ, ಫಕ್ರುದ್ದೀನ್ ಹಾಜಿ, ಹಾಜಿ ಸಾದುಕುಂಞಿ ಮಾಸ್ಟರ್ ಕಿನ್ಯ, ಸಿರಾಜ್ ಕಿನ್ಯ, ಫಾರೂಕ್ ಕಿನ್ಯ, ಅಬೂಸ್ವಾಲಿ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು. ಮುಸ್ತಫ ಫೈಝಿ ಸ್ವಾಗತಿಸಿ, ಇಮ್ರಾನ್ ಅಝ್‌ಹರಿ ವಂದಿಸಿದರು. ರಫೀಕ್ ಮೌಲವಿ ಅಜ್ಜಾವರ, ಇರ್ಫಾನ್ ಮೌಲ ಕಲಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.







