ಮಜ್ಲಿಸುನ್ನೂರ್ ಕೃತಿ ಬಿಡುಗಡೆ

ಮಂಗಳೂರು, ಮಾ. 30: ಶಂಸುಲ್ ಉಲಮಾ ಪಬ್ಲಿಕೇಷನ್‌ನ ಎಂ. ಆರ್. ಬುಕ್‌ಸ್ಟಾಲ್ ವತಿಯಿಂದ ಹೊರತಂದ ಮಜ್ಲಿಸುನ್ನೂರ್ ಕೃತಿಯನ್ನು ಎ. ಎಂ. ನೌಶಾದ್ ಬಾಖವಿ ತಿರುವಂತನಪುರಂರವರು ಮಜ್ಲಿಸುನ್ನೂರ್ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಹಸನ್ ಸಖಾಪಿ ಪೂಕೋಟೂರ್‌ರವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ನೌಶಾದ್ ಹಾಜಿ, ಸಿತಾರ್ ಮಜೀದ್ ಹಾಜಿ, ಹಾರೂನ್ ಅಹ್ಸನ್, ಝೈನ್ ಸಖಾಫಿ ಉಳ್ಳಾಲ, ಮಾಜಿ ಮೇಯರ್ ಅಶ್ರಫ್ ಕೆ., ಉಮರ್ ದಾರಿಮಿ, ಮುಸ್ತಫಾ ಫೈಝಿ, ಅಬ್ದುಲ್ಲಾ ಎಂ. ಎ. ಹಾಗೂ ಸಮಸ್ತ ಉಲಮಾ ಉಮರ ನೇತಾರರು ಉಪಸ್ಥಿತರಿದ್ದರು ಎಂದು ಮುಸ್ತಫಾ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





