ನಂದಿನಿ ಹಾಲು-ಮೊಸರು ಬೆಲೆ ಏರಿಕೆ
ಲೀಟರ್ ಹಾಲು 36, ಮೊಸರು 38ಕ್ಕೆ ಏರಿಕೆ

ಬೆಂಗಳೂರು, ಮಾ.30: ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಎರಡು ರೂ. ಹೆಚ್ಚಳ ಮಾಡಿ ಎ.1ರಿಂದ ಜಾರಿ ಆಗುವಂತೆ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ನಗರದಲ್ಲಿ ನಡೆದ ಕೆಎಂಎಫ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಲೀಟರ್‌ಗೆ 34ರೂ.ಇದ್ದ ಹಾಲಿನ ದರ 36ಕ್ಕೆ ಹಾಗೂ ಲೀಟರ್‌ಗೆ 36ರೂ.ಇದ್ದ ಮೊಸರಿನ ದರವನ್ನು 38ಕ್ಕೆ ಹೆಚ್ಚಳ ಮಾಡಲಾಗಿದೆ.
ಸುಮಾರು ಮೂರು ತಿಂಗಳಿಂದ ಹಾಲಿನ ದರ ಹೆಚ್ಚಳ ಬಗ್ಗೆ ಪ್ರಸ್ತಾಪವಿತ್ತು. ಈ ಹಿನ್ನೆಲೆಯಲ್ಲಿ ಕೆಎಂಎಫ್ ಎ.1ರಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
Next Story





