ಎ.2: 'ವಿ ಆರ್ ಯುನೈಟೆಡ್' ಸಂಘಟನೆ ಉದ್ಘಾಟನೆ

ಮಂಗಳೂರು, ಮಾ.30: ಕೆಲವು ಸಮಯಗಳ ಹಿಂದೆ ಸಮಾನ ಮನಸ್ಕ ಯುವ ಸಮುದಾಯವನ್ನು ಒಳಗೊಂಡು ಸ್ಥಾಪನೆಯಾದ ವಿಆರ್ ಯುನೈಟೆಡ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಎ.2ರಂದು ಸಂಜೆ 6:30ಕ್ಕೆ ನಗರದ ಕಂಕನಾಡಿ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಗೌರವ ಸಲಹೆಗಾರ ಡಾ.ಅನಂತ ಜಿ.ಪ್ರಭು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧರ್ಮ, ರಾಜಕೀಯದ ಲೇಪವಿಲ್ಲದೆ ಸಹಬಾಳ್ವೆಯ ಸಮ್ಮಿಲನದ ಆಶಯದಲ್ಲಿ ವಿಆರ್ ಯುನೈಟೆಡ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಸಂಸ್ಥೆಯಲ್ಲಿ 600ಕ್ಕೂ ಅಧಿಕ ಜನ ಸದಸ್ಯರಿದ್ದಾರೆ. 28 ವರ್ಷಗಳ ಬಳಿಕ ಕಂಕನಾಡಿ ಮೈದಾನದಲ್ಲಿ ಯಕ್ಷಗಾನ ಸಂಘಟಿಸುವುದು ಸಂಸ್ಥೆಯ ಹೆಮ್ಮೆಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕಡಂದಲೆ ಸುರೇಶ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯಅತಿಥಿಗಳಾಗಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟಿ, ಸಂಸದ ನಳಿನ್‌ಕುಮಾರ್ ಕಟೀಲು, ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್.ಲೋಬೊ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಬಿಜೆಪಿ ನಾಯಕ ವೇದವ್ಯಾಸ್ ಕಾಮತ್, ಉದ್ಯಮಿಗಳಾದ ಬಿ.ಎಂ.ಾರೂಕ್, ಸೌಂದರ್ಯ ರಮೇಶ್, ಮನ್ಸೂರ್ ಅಹ್ಮದ್ ಅಝಾದ್ ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ಯಾನ ಭಾರತ್ ಸೇವಾಶ್ರಮದ ಈಶ್ವರ ಭಟ್, ಟಿಆರ್‌ಎ್ ಸ್ಥಾಪಕಾಧ್ಯಕ್ಷ ಅಬ್ದುರ್ರವ್ೂ ಪುತ್ತಿಗೆ, ವೈಟ್‌ಡೌಸ್‌ನ ಸಂಸ್ಥಾಪಕಿ ಕೊರಿನ್ನಾ ರಸ್ಕಿನಾ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಎಡನೀರು ಮೇಳದವರಿಂದ ಸೀತಾ ಪರಿತ್ಯಾಗ-ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ವಿಶೇಷ ಆಕರ್ಪಣೆಯಾಗಿ ಯುವ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರ ಹಾಡುಗಾರಿಕೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅಝ್ಫರ್ ರಝಾಕ್, ಪ್ರಧಾನ ಸಂಚಾಲಕ ರಮೇಶ್ ಮಂಜೇಶ್ವರ, ಕಾರ್ಯದರ್ಶಿ ರಾಮ್‌ಪ್ರಸಾದ್ ರೈ, ದೇವರಾಜ್ ಶೆಟ್ಟಿ, ನಿಶಾಂತ್ ಆಳ್ವ, ನಾಗೇಶ್ ಕುದ್ಕೋರಿಗುಡ್ಡೆ, ಸುಕೇಶ್ ಭಂಡಾರಿ ಇರಾ ಉಪಸ್ಥಿತರಿದ್ದರು.







