ಕೊನೆಗೂ ನೊಬೆಲ್ ಸ್ವೀಕರಿಸಲಿರುವ ಡೈಲಾನ್

ಸ್ಟಾಕ್‌ಹೋಮ್, ಮಾ. 30: ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಗಾಯಕ ಬಾಬ್ ಡೈಲಾನ್ ಕೊನೆಗೂ ತನ್ನ ಪ್ರಶಸ್ತಿಯನ್ನು ಈ ವಾರಾಂತ್ಯದಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಸ್ವೀಡಿಶ್ ಅಕಾಡೆಮಿಯ ಸಭೆಯೊಂದರಲ್ಲಿ ಸ್ವೀಕರಿಸಲಿದ್ದಾರೆ ಎಂದು ಸ್ವೀಡಿಶ್ ಅಕಾಡೆಮಿ ಬುಧವಾರ ಪ್ರಕಟಿಸಿದೆ.
ಆದರೆ, ಈ ಸಭೆಗೆ ಹಾಜರಾಗಲು ಮಾಧ್ಯಮಗಳಿಗೆ ಅನುಮತಿಯಿಲ್ಲ ಹಾಗೂ ತಾನು ನೀಡಬೇಕಾಗಿರುವ ನೊಬೆಲ್ ಸ್ವೀಕಾರ ಭಾಷಣವನ್ನು ಅವರು ನಂತರ ಮುದ್ರಿತ ರೂಪದಲ್ಲಿ ನೀಡಲಿದ್ದಾರೆ.
ಅಕ್ಟೋಬರ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ ಬಳಿಕ ಹಲವು ವಾರಗಳ ಕಾಲ 75 ವರ್ಷದ ಗಾಯಕ ವೌನವನ್ನು ಕಾಯ್ದುಕೊಂಡು ಬಂದಿದ್ದರು ಹಾಗೂ ಡಿಸೆಂಬರ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ.
‘‘ಶುಭ ಸುದ್ದಿ ಏನೆಂದರೆ, ಸ್ವೀಡಿಶ್ ಅಕಾಡೆಮಿ ಮತ್ತು ಬಾಬ್ ಡೈಲಾನ್ ಈ ವಾರಾಂತ್ಯದಲ್ಲಿ ಭೇಟಿಯಾಗಲು ನಿರ್ಧರಿಸಿದ್ದಾರೆ’’ ಎಂದು ಅಕಾಡೆಮಿಯ ಖಾಯಂ ಕಾರ್ಯದರ್ಶಿ ಸಾರಾ ಡೇನಿಯಸ್ ಬ್ಲಾಗ್‌ಸ್ಪಾಟ್‌ವೊಂದರಲ್ಲಿ ಬರೆದಿದ್ದಾರೆ.
Next Story





