ಸುರತ್ಕಲ್ : ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ - ಬೆಚ್ಚಿ ಬಿದ್ದ ಸ್ಥಳೀಯರು
►ಕಾನಾ ಯಾರ್ಡ್‌ನಲ್ಲಿ ಘಟನೆ ►ಅನಿಲ ವರ್ಗಾವಣೆಗೆ ಅಧಿಕಾರಿಗಳ ವಿಳಂಭ ► ಸ್ಥಳೀಯರ ಆಕ್ರೋಶ

ಸುರತ್ಕಲ್, ಮಾ.30: ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆಯಾದ ಘಟನೆ ಗುರುವಾರ ರಾತ್ರಿ ಕಾನಾದ ಗ್ಯಾಸ್ ಫಿಲ್ಲಿಂಗ್ ಯಾರ್ಡ್‌ನಲ್ಲಿ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಅನಿಲ ಸೋರಿಕೆಯಾಗುತ್ತಿದ್ದ ಟ್ಯಾಂಕರ್‌ನ ಪಕ್ಕದಲ್ಲಿ ಗ್ಯಾಸ್ ತುಂಬಿಕೊಂಡಿದ್ದ 10 ಟ್ಯಾಂಕರ್ ಇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಸೋರಿಕೆಯಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬರಲು ವಿಳಂಬಿಸಿದರು. ಅಲ್ಲದೆ, ಸೋರಿಕೆಯಾಗುತ್ತಿರುವ ಟ್ಯಂಕರ್ ನಿಂದ ಅನಿಲ ವರ್ಗಾವಣೆಗೆ ಕ್ರಮ ಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಎಂಆರ್‌ಪಿಎಲ್‌ನ ಒಳಭಾಗದ ಯಾರ್ಡ್ ನಲ್ಲೇ ಅನಿಲ ಸೋರಿಕೆ ಯಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅನಿಲ ತುಂಬಿದ್ದ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳಿ ಸ್ಥಳಕ್ಕೆ ಆಗಮಿಸಲು ವಿಳಂಭಿಸಿದ್ದಾರೆ ಎಂದು ಸಾರ್ವನಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಸುರತ್ಕಲ್ ಪೊಳೀಸರು ಭೇಟಿ ನಿಡಿದ್ದು, ಯಾರ್ಡ್ ಸಮೀಪಕ್ಕೆ ಸಾರ್ವಜನಿಕರು ಮತ್ತು ವಾಹನಗಳನ್ನು ತಡೆಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.







