ನೂತನ ಸ್ಟೀಲ್ ಉತ್ಪನ್ನ ತಯಾರಿಕಾ ಘಟಕ ಡೆಲ್ಟಾ ಇಂಡಸ್ಟ್ರೀಸ್ ನ ‘ಜೆಎಸ್‌ಡಬ್ಲು ಎಕ್ಸ್‌ಪ್ಲೋರ್’ ಉದ್ಘಾಟನೆ
ಡೆಲ್ಟಾ ಇಂಡಸ್ಟ್ರೀಸ್ ನ

ಮಂಗಳೂರು, ಮಾ. 30: ನಗರದ ಹೊಲವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಡೆಲ್ಟಾ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಧೀನದ ನೂತನ ಸ್ಟೀಲ್ ಉತ್ಪನ್ನ ತಯಾರಿಕಾ ಘಟಕ ‘ಜೆಎಸ್‌ಡಬ್ಲು ಎಕ್ಸ್‌ಪ್ಲೋರ್’ ಗುರುವಾರ ಉದ್ಘಾಟನೆಗೊಂಡಿತು.
ಮಾಜಿ ಸಚಿವ ಬಿ.ಎ.ಮೊದೀನ್ ನೂತನ ಘಟಕದ ಉದ್ಘಾಟೆನಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡೆಲ್ಟಾ ಸಮೂಹ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಅಹ್ಮದ್ ಮುಹಿಯುದ್ದೀನ್, ಡೆಲ್ಟಾ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ಪಾಲುದಾರ ಬದ್ರುದ್ದೀನ್ ಪಣಂಬೂರು, ಜೆಎಸ್‌ಡಬ್ಲು ಸ್ಟೀಲ್ ಲಿಮಿಟೆಡ್‌ನ ದಕ್ಷಿಣ ಪ್ರಾದೇಶಿಕ ಚಾನೆಲ್ ಮ್ಯಾನೇಜರ್ ಅನೀಶ್ ಥಾಮಸ್, ಜೆಎಸ್‌ಡಬ್ಲು ಏರಿಯಾ ಸೇಲ್ಸ್ ಮ್ಯಾನೇಜರ್ ಮಯೂರ್ ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ, ಡೆಲ್ಟಾ ಇಂಡಸ್ಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಹಸನ್ ಶಾರೋಝ್, ಡೆಲ್ಟಾ ಸಮೂಹ ಸಂಸ್ಥೆಯ ನಿರ್ದೇಶಕ ಶಮೀಲ್ ಅಹ್ಮದ್, ಡೆಲ್ಟಾ ಇಂಡಸ್ಟ್ರೀಸ್‌ನ ಮ್ಯಾನೇಜರ್ ಕೆ.ಎಂ.ರಿಫಾಝ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅನುಭವ ಡಿಸೈನರ್ಸ್‌ನ ಮಾಲಕ ಹಾಗೂ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾ ಇದರ ಉಪಾಧ್ಯಕ್ಷ ವಿಜಯ ವಿಷ್ಣುಮಯ್ಯ ಮತ್ತು ಸಂಸ್ಥೆಯ ಉದ್ಯೋಗಿ ಜಯರಾಮ್ ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮುಹಮ್ಮದ್ ಹಸನ್ ಶಾರೋಝ್ ಜೆಎಸ್‌ಡಬ್ಲು ಎಕ್ಸ್‌ಪೋರ್‌ನ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಅನೀಶ್ ಥಾಮಸ್ ನೂತನ ಉತ್ಪನ್ನ ಘಟಕಕ್ಕೆ ಶುಭ ಹಾರೈಸಿದರು.
ಲವಿಟಾ ಮಿನೇಜಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಡೆಲ್ಟಾ ಇಂಡಸ್ಟೀಸ್‌ನ ವಿತರಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಲರ್ ಕೋಟಡ್ ಶೀಟ್ಸ್, ಟರ್ಬೊ ವೆಂಟಿಲೇಟರ್ ಫ್ಯಾನ್ಸ್, ಸ್ಲಿಟ್ಟಿಂಗ್ ಕಾಯಿಲ್ಸ್, ಗಾಲ್ವನೈಸ್ಡ್ ಶೀಟ್ಸ್, ಪ್ರೊಫೈಲ್ ಆ್ಯಂಡ್ ಪ್ಲೇನ್ ರಿಜ್, ಡೌನ್ ಟೇಕ್ ಪೈಪ್ಸ್, ಜಿ.ಸಿ. ಶೀಟ್ಸ್, ಕಾರ್ನರ್ ಫ್ಲಾಶಿಂಗ್ಸ್, ಸ್ಕೈಲೈಟ್ಸ್ ಆ್ಯಂಡ್ ವಾಲ್ ಲೈಟ್ಸ್ ಶೀಟ್ಸ್, ಮ್ಯಾಂಗಲೂರ್ ಟೈಲ್ ರೂಫ್ ಶೀಟ್ಸ್ ಮೊದಲಾದ ಸ್ಟೀಲ್ ಉತ್ಪನ್ನಗಳ ಸಂಗ್ರಹ ನೂತನ ತಯಾರಿಕಾ ಘಟಕದಲ್ಲಿ ಲಭ್ಯವಾಗಲಿದೆ.







