ನೇಣು ಬಿಗಿದು ಬಾಲಕಿ ಆತ್ಮಹತ್ಯೆ
ಚಿತ್ರದುರ್ಗ, ಮಾ.30: ಎಂಟನೆ ತರಗತಿ ಬಾಲಕಿಯೋರ್ವಳು ಯುಗಾದಿ ಹಬ್ಬದ ದಿನ ಬುಧವಾರ ಸೊಂಡೆಕೆರೆಯಲ್ಲಿರುವ ಸ್ವಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಡಿ.ಎಸ್.ಹಳ್ಳಿಯಲ್ಲಿ ಓದುತ್ತಿದ್ದ ಪ್ರಿಯಾ(14) ಎಂಬ ಬಾಲಕಿ ಸಂಜೆ 6:30ರಲ್ಲಿ ಮನೆಯೊಳಗಿರುವ ಕೊಠಡಿಯೊಳಗೆ ಹೋಗಿ ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ಮನೆಯವರು ಗಾಬರಿಗೊಂಡು ಬಾಗಿಲು ಮುರಿದು ನೋಡಿದಾಗ ಪ್ರಿಯಾ ನೇಣು ಬಿಗಿದು ಮೃತಳಾಗಿದ್ದಳು ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಐಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





