ಬಜ್ಪೆ : ಖಾಯಂ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ

ಬಜ್ಪೆ, ಮಾ.30: ಇಲ್ಲಿನ ಗ್ರಾಮ ಪಂಚಾಯತ ವ್ಯಾಪ್ತಿಯ ಸೌಹಾರ್ಧನಗರದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಖಾಯಂ ಕುಡಿಯುವ ನೀರಿನ ಕಾಮಗಾರಿಗೆ ಮಂಗಳೂರು ಉತ್ತರ ವಲಯ ಶಾಸಕ ಮೊಯ್ದೀನ್ ಬಾವಾ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಕುಡಿಯುವ ನೀರಿನ ಕಾಮಗಾರಿಯ ಮೂಲಕ ಸೌಹಾರ್ಧ ನಗರ ಸೇರಿದಂತೆ ಕೊಲಂಬೆ ಗ್ರಾಮದ ಸುತ್ತಲಿನ ಜನರ ನೀರಿನ ಬವಣೆಯನ್ನು ಖಾಯಂ ಆಗಿ ನೀಗಿಸಲಾಗುವುದು ಎಂದರು.
ಮಂಗಳೂರು ಉತ್ತರ ವಲಯ ಪ್ರದೆಶದ ಜನತೆ ಅಭಿವೃದ್ಧಿಯ ಬಗ್ಗೆ ಕಂಡ ಕನಸುಗಳು ಬೆಳಗಾಗುವುದರಲ್ಲಿ ನನಸಾಗುತ್ತಿವೆ ಎಂದರು.
ಕಂದಾವರ ಗ್ರಾಮ ಪಂಚಾಯತ್‌ಗೆ ಈವರೆಗೆ ಅತೀಹೆಚ್ಚಿನ ಅನದಾನಗಳನ್ನು ನೀಡಲಾಗಿದ್ದು, ಶಾಲೆ, ವಸತಿ, ದಾರಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಜ್ಪೆ ಪೊಲೀಸ್ ಠಾಣಾ ನೂತನ ರಸ್ತೆ ಕಾಮಗಾರಿಗೆ 1.5 ಕೋಟಿ ರೂ. ಇಡಲಾಗಿದೆ. ಅಲ್ಲದೆ, ಪೊಳಲಿ ದ್ವಾರದಿಂದ ಬಜ್ಪೆ ರಸ್ತೆಗೆ 20.5 ಕೋ.ರೂ ಅನುದಾನ ಮಂಜೂರು ಮಾಡಲಾಗಿದೆ ಎಂದು ನುಡಿದರು.
Next Story





