ಕಟೀಲಿನಲ್ಲಿ ಅಂತರ್ ಕಾಲೇಜು ಸಾಂಸ್ಕ್ರತಿಕ ಸ್ಪರ್ದೆ : ಗೋವಿಂದದಾಸ, ಕಟಪಾಡಿ ಕಾಲೇಜುಗಳಿಗೆ ಪ್ರಶಸ್ತಿ
.jpeg)
ಮುಲ್ಕಿ, ಮಾ.30: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಸಾಂಸ್ಕ್ರತಿಕ ಸ್ಪರ್ದೆಯಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜು ಪ್ರಥಮ ಪ್ರಶಸ್ತಿಯನ್ನು ಹಾಗೂ ಕಟಪಾಡಿ ಕೆವಿಎಸ್ ಕಾಲೇಜು ದ್ವಿತೀಯ ಪ್ರಶಸ್ತಿಯನ್ನು, ಸುಂಕದಕಟ್ಟೆ ನಿರಂಜನಸ್ವಾಮಿ ಕಾಲೇಜು ತ್ರತೀಯ ಪ್ರಶಸ್ತಿಯನ್ನು ತನ್ನದಾಗಿಸಿಗಿಸಿಕೊಂಡವು. ಸುಂಕದಕಟ್ಟೆ ನಿರಂಜನ ಸ್ವಾಮಿ ಕಾಲೇಜು ತಂಡ ಉತ್ತಮ ಕಾರ್ಯಕ್ರಮ ನಿರೂಪಣೆ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ನ್ರತ್ಯಕ್ಕಾಗಿ, ಸುರತ್ಕಲ್ ಗೋವಿಂದದಾಸ ಕಾಲೇಜು ತಂಡ ಉತ್ತಮ ಪ್ರಹಸನಕ್ಕಾಗಿ, ಪ್ರಶಸ್ತಿ ಪಡೆದವು.
ಕಟೀಲು ದೇಗುಲದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಮಾಜಿ ಜಿ.ಪಂ. ಸದಸ್ಯ ಈಶ್ವರ ಕಟೀಲ್, ಪ್ರವೀಣ್ ಭಂಡಾರಿ, ಕಾಲೇಜಿನ ಪ್ರಾಚಾರ್ಯ ಬಾಲಕ್ರಷ್ಣ ಶೆಟ್ಟಿ ಎಂ, ಡಾ.ಕ್ರಷ್ಣ ಕಾಂಚನ್, ವಿಜಯ್, ವಿದ್ಯಾರ್ಥಿ ಪ್ರಮುಖರಾದ ಪ್ರಜ್ವಲ್ ನಾಯಕ್, ಮನೀಷ್ ಶೆಟ್ಟಿ, ಶ್ರೀ ವೈಷ್ಣವಿ, ಮನೀಷ್ ಶೆಟ್ಟಿಗಾರ್ ಮತ್ತಿತರರಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಮೊಕ್ತೇಸರರಾದ ಸನತ್ ಕುಮಾರ್ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಭೂತನಾಥೇಶ್ವರ ದೇವಸ್ಥಾನದ ವಿಜಯನಾಥ ವಿಠಲ ಶೆಟ್ಟಿ, ಬಜಪೆ ವ್ಯವಸಾಯ ಬ್ಯಾಂಕಿನ ರತ್ನಾಕರ ಶೆಟ್ಟಿ, ಸುಧೀರ್ ಶೆಟ್ಟಿ ಮತ್ತಿತರರಿದ್ದರು.







