ಎಸ್ಪಿ ನಾಯಕನ ಪುತ್ರನ ಜಾನುವಾರು ಸಂರಕ್ಷಣಾ ಕೇಂದ್ರಕ್ಕೆ ಭೇಟಿನೀಡಲಿರುವ ಆದಿತ್ಯನಾಥ್

ಲಕ್ನೊ, ಮಾ. 31: ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಯಾದವ್ರ ಪುತ್ರ ಪ್ರತೀಕ್ ಯಾದವ್ ಮತ್ತು ಸೊಸೆ ಅಪರ್ಣಾ ಯಾದವ್ ಸೇರಿ ನಡೆಸುತ್ತಿರುವ ಜಾನುವಾರು ಸಂರಕ್ಷಣಾ ಕೇಂದ್ರಕ್ಕೆ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. ಮುಲಾಯಂ ಪುತ್ರನ ಕಣ್ವ ಉಪ್‌ವನ್ ಎನ್ನುವ ಜಾನುವಾರು ಸಂರಕ್ಷಣಾ ಕೇಂದ್ರ ಲಕ್ನೊದಲ್ಲಿದೆ. ಅಲೆದಾಡುವ ಜಾನುವಾರುಗಳಿಗೆ ಇಲ್ಲಿ ಆಶ್ರಯ ನೀಡಲಾಗುತ್ತಿದೆ. ಮುಲಾಯಂ ಪತ್ನಿ ಸಾಧನಾ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಅಲ್ಲಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೊಡನೆ ಪ್ರತೀಕ್ ಯಾದವ್ ಮತ್ತು ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿದ್ದ ಅರ್ಪಣಾ ಯಾದವ್ ಆದಿತ್ಯನಾಥ್‌ರನ್ನು ಭೇಟಿಯಾಗಿದ್ದರು. ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿದ್ದ ಅರ್ಪಣಾ ಲಕ್ನೊದಲ್ಲಿ ಸ್ಪರ್ಧಿಸಿ ಬಿಜೆಪಿಯ ರೀಟಾ ಬಹುಗುಣ ಜೋಷಿ ವಿರುದ್ಧ 30,000 ವೋಟುಗಳಿಂದ ಪರಾಭವಗೊಂಡಿದ್ದರು.
Next Story





