ಸ್ಯಾನಿಟಿರಿ ನ್ಯಾಪ್‌ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸಬೇಕು: ಮೇನಕಾಗಾಂಧಿ

ಹೊಸದಿಲ್ಲಿ,ಮಾ.31: ಪರಿಸರ ಸ್ನೇಹಿ ಹಾಗೂ ಕರಗಿಹೋಗುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಸರಕು ಸೇವಾ ತೆರಿಗೆಯಲ್ಲಿ ಶೇ. 100 ತೆರಿಗೆ ವಿನಾಯಿತಿ ನೀಡಬೇಕೆಂದು ಕೇಂದ್ರ ಮಹಿಳಾಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾಗಾಂಧಿ ಹೇಳಿದ್ದಾರೆ. ಈ ವಿಷಯವನ್ನು ಪ್ರಸ್ತಾಪಿಸಿ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿದ್ದಾರೆ.
ಸಾನಿಟರಿ ಪ್ಯಾಡ್‌ಗಳಿಗೆ ಸರಕು ಸೇವಾ ತೆರಿಗೆ ವಿಧಿಸಬಾರದು ಎಂದು ಸಂಸದೆ ಸುಷ್ಮಿತಾ ದೇವ್‌ರ ನೇತೃತ್ವದಲ್ಲಿ change.org ಎನ್ನುವ ಸಂಘಟನೆಯು ಮೇನಕಾ ಗಾಂಧಿಗೆ ಪತ್ರ ನೀಡಿತ್ತು. ಮರುದಿವಸ ಮೇನಕಾ ಜೇಟ್ಲಿಗೆ ಪತ್ರ ಬರೆದು ತೆರಿಗೆ ವಿನಾಯಿತಿಗೆ ಒತ್ತಾಯಿಸಿದ್ದಾರೆ.
21ಲಕ್ಷ ಮಂದಿ ಚೇಂಜ್ ಆರ್ಗ್‌ನ ಮನವಿಗೆ ಸಹಿಹಾಕಿದ್ದಾರೆ. ಸ್ಯಾನಿಟರಿ ನ್ಯಾಪ್‌ಕಿನ್ ಎಲ್ಲ ಮಹಿಳೆಯರಿಗೆ ಅತ್ಯಂತ ಅಗತ್ಯವಾಗಿದ್ದು, ಗರ್ಭ ನಿರೋಧ ವಸ್ತುಗಳಿಗಿರುವಂತೆ ಇದನ್ನೂ ಸಂಪೂರ್ಣ ತೆರಿಗೆ ಮುಕ್ತಗೊಳಿಸಬೇಕೆಂದು ಸುಷ್ಮಿತಾ ದೇವ್ ಆಗ್ರಹಿಸಿದ್ದರು.
Next Story