ಗುಜರಾತ್‌ನಲ್ಲಿ ದನವನ್ನು ಕೊಂದರೆ ಜೀವಾವಧಿ ಶಿಕ್ಷೆ!

ಅಹ್ಮದಾಬಾದ್, ಮಾರ್ಚ್ 31: ಗುಜರಾತ್‌ನಲ್ಲಿ ದನವನ್ನು ಕಡಿಯುವುದನ್ನು ಜೀವಾಧಿಶಿಕ್ಷೆಯ ಅಪರಾಧದ ಸಾಲಿಗೆಸೇರಿಸಿ ಕಾನೂನು ತಿದ್ದುಪಡಿ ಮಾಡಲಾಗಿದೆ. 1954ರ ಪ್ರಾಣಿ ಸಂರಕ್ಷಣಾ ಕಾನೂನಿಗೆ 2011ರಲ್ಲಿ ನರೇಂದ್ರ ಮೋದಿ ತಿದ್ದುಪಡಿತಂದಿದ್ದರು. ಅವರು ಗೋಹತ್ಯೆಯನ್ನು ಏಳುವರ್ಷ ಜೈಲು ಶಿಕ್ಷೆ ನೀಡಬಹುದಾದ ಅಪರಾಧದ ಸಾಲಿಗೆ ಸೇರಿಸಿದ್ದರು. ಮಾಂಸಕ್ಕಾಗಿ ದನಸಾಗಾಟವನ್ನು ಅಪರಾಧವನ್ನಾಗಿಯೂ ಅವರು ಮಾಡಿದ್ದರು.
ದನವನ್ನು ಕೊಲ್ಲುವವರಿಗೆ 2011ರ ಕಾನೂನು ಪ್ರಕಾರ ಏಳು ವರ್ಷ ಜೈಲು, 50,000 ರೂಪಾಯಿ ದಂಡಲಭಿಸುತ್ತಿತ್ತು. ಇನ್ನುಮುಂದೆ ಹೊಸ ತಿದ್ದುಪಡಿ ಪ್ರಕಾರ ಜೀವಾವಧಿ ಶಿಕ್ಷೆ ಸಿಗಲಿದೆ. ಜಾನುವಾರು ಸಾಗಾಟದ ವೇಳೆ ವಶವಾದ ವಾಹನಗಳನ್ನು ಶಾಶ್ವತವಾಗಿ ಬಿಡುಗಡೆ ಗೊಳಿಸುವುದಿಲ್ಲ ಎಂದು ಹೊಸ ತಿದ್ದುಪಡಿಯಲ್ಲಿ ವಿವರಿಸಲಾಗಿದೆ.
Next Story





