2 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ಎತ್ತಿಕೊಂಡು ಕಾಡಿಗೆ ಪರಾರಿಯಾದ ಕೋತಿಗಳು!

ಪಿರುಮೇಡ್(ಕೇರಳ), ಮಾ. 31: ಲಾರಿ ನಿಲ್ಲಿಸಿದ್ದಲ್ಲಿಂದ ಅದರಲ್ಲಿದ್ದ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ಇದ್ದ ಬ್ಯಾಗನ್ನು ಕೋತಿಗಳ ಗುಂಪೊಂದು ಎತ್ತಿಕೊಂಡು ಹೊರಟು ಹೋಗಿದೆ. ಈ ಘಟನೆ ಪಿರುಮೇಡ್ ವಳಂಚಂಗಾನಂ ಎಂಬಲ್ಲಿ ನಿನ್ನೆ ನಡೆದಿದೆ. ತಮಿಳ್ನಾಡಿನ ತಿರಿಚ್ಚಿರಪ್ಪಳ್ಳಿಯ ವ್ಯಾಪಾರಿಗಳಿಗೆ ಈ ಹಣ ನಷ್ಟವಾಗಿದೆ.
ಕೇರಳದಲ್ಲಿ ಬಾಳೆಗೊನೆ ಮಾರಾಟ ಮಾಡಿ ಅವರು ಲಾರಿಯಲ್ಲಿ ಊರಿಗೆ ಮರಳುತ್ತಿದ್ದರು. ಲಾರಿಯನ್ನು ವಳಂಚಂಗಾನಂ ಎಂಬಲ್ಲಿ ನಿಲ್ಲಿಸಿ ಚಾಕುಡಿಯಲು ಇಳಿದ್ದರು. ಲಾರಿಯಲ್ಲಿ ಒಟ್ಟು 20 ಮಂದಿ ಇದ್ದರು ಎನ್ನಲಾಗಿದೆ. ಅವರೆಲ್ಲ ಚಾಕುಡಿಯಲು ಹೋದಾಗ ಕೋತಿಗಳ ತಂಡ ಲಾರಿಯೊಳಗೆ ಹತ್ತಿ ಅದರಲ್ಲಿದ್ದ ಹಣದ ಬ್ಯಾಗನ್ನು ಎತ್ತಿಕೊಂಡು ಕಾಡಿನೊಳಗೆ ಓಡಿವೆ. ಹಣಕ್ಕಾಗಿ ಕಾಡಿಡೀ ಹುಡುಕಿದರು ಮಂಗಗಳು ಪತ್ತೆಯಾಗಲಿಲ್ಲ. ಮರಿಂಞಪುಯ ಕಾಡಿನಿಂದ ಇಲ್ಲಿ ಕೋತಿಗಳು ರಸ್ತೆಗಿಳಿದು ಬರುತ್ತವೆ.
Next Story





