25 ವರ್ಷ ಮೇಲ್ಪಟ್ಟವರು 2017ರ ನೀಟ್ ಪರೀಕ್ಷೆಗೆ ಹಾಜರಾಗಲು ಸುಪ್ರೀಂ ಅಸ್ತು
ಹೊಸದಿಲ್ಲಿ,ಮಾ.31: ನೀಟ್ ಪರೀಕ್ಷೆಗೆ ವಯೋಮಿತಿಯನ್ನು ಶುಕ್ರವಾರ ಸಡಲಿಸಿದ ಸರ್ವೋಚ್ಚ ನ್ಯಾಯಾಲಯವು, 25ವರ್ಷಕ್ಕೂ ಹೆಚ್ಚು ಪ್ರಾಯದ ಅಭ್ಯರ್ಥಿಗಳು 2017ರ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿತು.
ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನೂ ಎ.5ರವರೆಗೆ ವಿಸ್ತರಿಸಿತು.
ಮುಂದಿನ ಶೈಕ್ಷಣಿಕ ವರ್ಷದಿಂದ ವಯೋಮಿತಿಯನ್ನು ನಿಗದಿಗೊಳಿಸಬಹುದಾಗಿದೆ ಎಂದು ಪೀಠವು ತಿಳಿಸಿತು.
ಸಿಬಿಎಸ್‌ಇ ನೀಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಯೋಮಿತಿಯನ್ನು 25 ವರ್ಷಗಳಿಗೆ ನಿಗದಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
Next Story









