ಹಾಡಹಗಲೇ ಮುಖ್ಯಶಿಕ್ಷಕನನ್ನು ಇರಿದು ಹತ್ಯೆ

ಮಂಡ್ಯ, ಮಾ.31: ಶಾಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಮುಖ್ಯಶಿಕ್ಷಕರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮದ್ದೂರು ತಾಲೂಕು ಅರೆಚಾಕನಹಳ್ಳಿ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮದ್ದೂರು ತಾಲೂಕು ಬಿದರಹೊಸಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಶಿಭೂಷಣ್ ಕೊಲೆಯಾದ ದುರ್ದೈವಿ. ಇವರು ಮಂಡ್ಯದಿಂದ ಎಂದಿನಂತೆ, ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಈ ಕೃತ್ಯವೆಸಗಲಾಗಿದೆ.
ಮಂಡ್ಯದಿಂದ ಕಾರೊಂದರಲ್ಲಿ ಶಶಿಭೂಷಣ್ ಅವರ ಬೈಕ್‌ನ್ನು ಹಿಂಭಾಲಿಸಕೊಂಡು ಬಂದ ದುಷ್ಕರ್ಮಿಗಳು, ಅರೆಚಾಕನಹಳ್ಳಿ ಬಳಿ ಬೈಕ್‌ಗೆ ಢಿಕ್ಕಿಹೊಡೆದು, ಕೆಳಗೆ ಬಿದ್ದ ಶಶಿಭೂಷಣ್ ಅವರನ್ನು ಇರಿದು ಪರಾರಿಯಾದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.
Next Story





