ಕುಂಚ ತೋರಣಕ್ಕೆ "ಇಂಡಿಯಾ ಬುಕ್ ಆಫ್ ರೆಕಾರ್ಡ್" ಪ್ರಶಸ್ತಿ
.jpg)
ತುಮಕೂರು.ಮಾ.31: ಸಿದ್ದಗಂಗಾ ಮಠದ ಡಾ.ಶ್ರೀಶಿವಕುಮಾರ ಮಹಾಸ್ವಾಮಿಗಳ ಜೀವನಾಧಾರಿತ ಚಿತ್ರಕಲಾ ಕೃತಿಗಳ ಬೃಹತ್ ಕುಂಚ ತೋರಣ ಪುಸ್ತಕಕ್ಕೆ "ಇಂಡಿಯಾ ಬುಕ್ ಆಫ್ ರೆಕಾರ್ಡ್" ಪ್ರಶಸ್ತಿಯ ಕಿರೀಟ ದೊರೆತಿದೆ.
109 ಜನ ಚಿತ್ರಕಲಾವಿದರು ಒಟ್ಟಿಗೆ ಸೇರಿ ಒಬ್ಬ ವ್ಯಕ್ತಿಯ ಬಗ್ಗೆ ಏಕಕಾಲಕ್ಕೆ 109 ಕಲಾಕೃತಿಗಳನ್ನು ರಚಿಸಿದ ದಾಖಲೆಗೆ ಪಾತ್ರವಾಗಿದೆ.
ಶ್ರೀ ಶಿವಕುಮಾರ ಮಹಾಸ್ವಾಮಿಗಳ 109ನೆ ವರ್ಷದ ಹುಟ್ಟುಹಬ್ಬಕ್ಕೆ 109 ಕಲಾಕೃತಿಗಳನ್ನು ರಚಿಸಿ ದಾಖಲಿಸಿದ ಸಾಧನೆ ನಾಡಿನ ಚಿತ್ರಕಲಾವಿದರಿಗೆ ಸೇರುವಾಗಲೇ ಅವರು ರಚಿಸಿದ ಕಲಾಕೃತಿಗಳ ನೋಡುವ ಪುಸ್ತಕ ಕುಂಚ ತೋರಣಮಾಡಿದ್ದು, ಇನ್ನೊಂದು ಸಾಧನೆ ಪ್ರಸ್ತುತ 110ನೆ ವಸಂತಕ್ಕೆ ಕಾಲಿಡಲಿರುವ ಸಂಭ್ರಮಕ್ಕೆ ಕುಂಚ ತೋರಣಕ್ಕೆ "ಇಂಡಿಯಾ ಬುಕ್ ಆಫ್ ರೆಕಾರ್ಡ್" ಪ್ರಶಸ್ತಿ ಬಂದಿದೆ.
ಭೂಮಿಬಳಗ ಮತ್ತು ಕಲರ್ಸ್ ಗ್ರೂಪ್(ರಿ)ಸಂಸ್ಥೆಗಳು ಜಂಟಿಯಾಗಿ ಕಳೆದ ವರ್ಷ ಆಯೋಜಿಸಿದ್ದ ಕುಂಚ ತೋರಣಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕಲಾವಿದರು ಭಾಗವಹಿಸಿ ಶ್ರೀಸಿದ್ದಗಂಗಾ ಶ್ರೀಗಳ ಕುರಿತು ತಮ್ಮ ಮನಸ್ಸಿನಲ್ಲಿದ್ದ ಕಲ್ಪನೆಗೆ ಬಣ್ಣ ಹಚ್ಚಿದ್ದರು.ಇದನ್ನು ಒಂದು ಪುಸ್ತಕದ ರೂಪದಲ್ಲಿ ತರಲಾಗಿತ್ತು. ಸದರಿ ಪುಸ್ತಕ ಇಚಿಡಿಯಾ ಬುಕ್ ಅಫ್ ರೇಕಾರ್ಡ್ ಸೇರಿದೆ.





