ಗಾಂಜಾ ಸೇವಿಸುತ್ತಿದ್ದ ಯುವಕನ ಸೆರೆ

ಮಂಗಳೂರು, ಮಾ.31: ಪಣಂಬೂರು ಸಮೀಪದ ತಣ್ಣೀರುಬಾವಿ ಸಮುದ್ರ ಕಿನಾರೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಬೋಳೂರಿನ ಅನೀಶ್ ಅಮೀನ್ (24) ಎಂಬಾತನನ್ನು ಪಣಂಬೂರು ಠಾಣೆಯ ಕ್ರೈಂ ವಿಭಾಗದ ಎಸ್ಸೈ ಕುಮಾರೇಶನ್ ಶುಕ್ರವಾರ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗ್ಗೆ ಸುಮಾರು 10:.20ಕ್ಕೆ ಪೊಲೀಸರು ದಾಳಿ ನಡೆಸಿದಾಗ ಆರೋಪಿ ತಪ್ಪಿಸಲು ಯತ್ನಿಸಿದ. ಹಿಡಿದು ವಿಚಾರಿಸಿದಾಗ ಮೊದಲ ತನ್ನ ಹೆಸರನ್ನು ಅಜಿತ್ ಎಂದು ಹೇಳಿದ. ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ತನ್ನ ನಿಜ ಹೆಸರು ಹೇಳಿದ.
ಬಳಿಕ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿದೆ.
Next Story





