ಜುಗಾರಿ ಆಟವಾಡುತ್ತಿದ್ದ ನಾಲ್ವರ ಸೆರೆ

ಮಂಗಳೂರು, ಮಾ.31:ಮೂಡುಪೆರಾರ್ ಗ್ರಾಮದ ಅರ್ಕೆಪದವು ಎಂಬಲ್ಲಿನ ಸರಕಾರಿ ಗುಡ್ಡದಲ್ಲಿ ಜುಗಾರಿ ಆಟವಾಡುತ್ತಿದ್ದ ನಾಲ್ಕು ಮಂದಿಯನ್ನು ಬಜ್ಪೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಚೆನ್ನಪ್ಪಗೌಡ, ದುರ್ಗಾಪ್ರಸಾದ್, ರಮೇಶ್ ಪೂಜಾರಿ, ರಾಜೇಶ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಕ್ರೈಂ ವಿಭಾಗದ ಎಸ್ಸೈ ರಾಜಾರಾಮ್ ಶುಕ್ರವಾರ ಅಪರಾಹ್ನ 12:15ಕ್ಕೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಜೂಜಾಟಕ್ಕೆ ಬಳಸುತ್ತಿದ್ದ 3,150 ರೂ. ಮತ್ತು 52 ಇಸ್ಪೀಟ್ ಎಲೆ ಹಾಗೂ ನೀಲಿಬಣ್ಣದ ಟರ್ಪಾಲ್ ಶೀಟ್ ವಶಪಡಿಸಿಕೊಂಡಿದ್ದಾರೆ.
Next Story





