ಅಕ್ರಮ ಕಸಾಯಿಖಾನೆ: ಇಬ್ಬರ ಸೆರೆ

ಕಾಪು, ಮಾ.31: ಪಕೀರ್ಣಕಟ್ಟೆ ಎಂಬಲ್ಲಿ ಇಂದು ಬೆಳಗಿನ ಜಾವ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಶಿರ್ವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತೀರ್ಥಹಳ್ಳಿ ಸಮೀಪದ ಮೇಗರಹಳ್ಳಿಯ ಹುಸೇನ್(30) ಹಾಗೂ ಬೆಳಪು ನಿವಾಸಿ ನಿಸಾರ್ ಅಹ್ಮದ್(28) ಎಂದು ಗುರುತಿಸಲಾಗಿದೆ. ಬಂಧಿತರಿಂದ ದನದ ಮಾಂಸ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





