ಸಾಗರ: ಹಸೈನಾರ್ ಕೊಲೆ ಪ್ರಕರಣ
ಎ. 6ರಂದು ಆರೋಪಿಗಳಿಗೆ ಶಿಕ್ಷೆ ಪ್ರಕಟ
ಸಾಗರ , ಮಾ.31: 2015ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಜನ ಆರೋಪಿಗಳಿಗೆ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದಿನಾಂಕ 20-10-2015ರಂದು ಹಸೈನಾರ್ ಎಂಬವರನ್ನು ಬಿ.ಎಚ್.ರಸ್ತೆಯಲ್ಲಿ ಜನಜಂಗುಳಿ ಪ್ರದೇಶದಲ್ಲಿ ಹತ್ಯೆ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿದ್ದರು.
ನಗರದ ಶರಾವತಿ ಕೂಲ್‌ಡ್ರಿಂಕ್ಸ್ ಸಮೀಪ ಆರೋಪಿಗಳಾದ ಮಹ್ಮದ್ ಆಲಿ, ಇಸ್ಮಾಯಿಲ್, ಶರೀಫ್, ಪ್ರಕಾಶ್, ಪ್ರತಾಪ್, ಇಮ್ರಾನ್, ಬೊಮ್ಮ ಮತ್ತು ರಾಹಿಲ್ ಎಂಬವರು ರಾತ್ರಿ 8 ಗಂಟೆ ಸುಮಾರಿಗೆ ಹಸೈನಾರ್‌ಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು.
ಹಲ್ಲೆಯಿಂದ ಗಂಭೀರ ಗಾಯ ಗೊಂಡಿದ್ದ ಹಸೈನಾರ್‌ಗೆ ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊ
ಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮಹೇಶ್ವರಿ ಎಸ್. ಹಿರೇಮಠ್ ಅವರು, ಸಾಕ್ಷಿದಾರರನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಆರೋಪಿತರಿಗೆ ಕಲಂ 302ರ ಅಡಿಯಲ್ಲಿ ಅಪರಾಧ ಸಾಬೀತಾಗಿರುವುದನ್ನು ಘೋಷಿಸಿದರು.
ಅಲ್ಲದೆ, ಎ.6ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿ ಕೋರ್ಟ್‌ನ ಅವಧಿಯನ್ನು ಮುಂದೂಡಿದರು. ಸದರಿ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ. ಯಳಗೇರಿ ವಾದವನ್ನು ಮಂಡಿಸಿದ್ದರು.







