ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು
ಕುಶಾಲನಗರ, ಮಾ.31: ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಮುಂಬಾಗಿಲು ಮುರಿದು ದರೋಡೆ ನಡೆಸಿದ ಘಟನೆ ಇಲ್ಲಿನ ನಂಜುಡೇಶ್ವರ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ನಂಜುಡೇಶ್ವರ ಬಡಾವಣಿಯಲ್ಲಿ ವಾಸವಿರುವ ಡಾ. ಉದಯ ಕುಮಾರ್ ಎಂಬವರ ಮನೆಯ ಮುಂಬಾಗಿಲು ಮುರಿದು ಒಳಹೊಕ್ಕ ಕಳ್ಳರು ಸುಮಾರು 100 ಗ್ರಾಂ ಬೆಲೆಬಾಳುವ ಚಿನ್ನಾಭರಣ ದೋಚಿದ್ದಾರೆ ಎಂದು ಉದಯ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಉದಯಕುಮಾರ್ ಗುರುವಾರ ಕೆಲಸ ಮುಗಿಸಿ ರಾತ್ರಿ 9:30 ರ ಸುಮಾರಿಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕುಶಾಲನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





