ಕಾರು ಪಲ್ಟಿ: ಓರ್ವ ಸಾವು
ಅಂಕೋಲಾ, ಮಾ.31: ರಾಷ್ಟ್ರೀಯ ಹೆದ್ದಾರಿ 63ರಲ್ಲಿರುವ ಬಡಿಗೇಣ ಮಾಸ್ತಿಕಟ್ಟಾ ಸಮೀಪ ಸ್ವೀಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿಉರುಳಿ ಬಿದ್ದ ಪರಿಣಾಮ ಓರ್ವ ವ್ಯಕ್ತಿಯು ಸ್ಥಳದಲ್ಲಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಯಲ್ಲಾಪುರ ತಾಲೂಕಿನ ಗುಳ್ಳಾಪುರದ ನಿವಾಸಿ ಗಣೇಶ ರಮೇಶ ಪೂಜಾರಿ(26) ಮೃತಪಟ್ಟಿರುವ ವ್ಯಕ್ತಿ. ಜಯಶೀಲಾ ಸುಬ್ಬಾ ಸಿದ್ಧಿ(17), ಯಶವಂತ ಸುಬ್ಬಾ ಸಿದ್ಧಿ (14) ಹಾಗೂ ವಿನಾಯಕ ವೆಂಕಟೇಶ ಬಾಂದೇಕರ(22) ಎಂಬವರು ಗಾಯಗೊಂಡಿದ್ದಾರೆ. ಇವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಜಯಶೀಲಾ ಸಿದ್ಧಿ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಕಾರವಾರದಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲೆಂದು ಗುಳ್ಳಾಪುರದಿಂದ ಹೊರಟಿದ್ದರು ಎನ್ನಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಸೈ ವೀಣಾ ಹೊನ್ನಿ ಈ ಕುರಿತು ಪ್ರಕರಣವನ್ನು ದಾಖಲಿಸಿ ಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





