ವಿಷ ಸೇವನೆ: ತಾಯಿ, ಮಗು ಸಾವು
ಸೊರಬ, ಮಾ.31: ವಿಷ ಸೇವಿಸಿದ ತಾಯಿ ಹಾಗೂ ಆಕೆಯ ಎದೆಹಾಲು ಕುಡಿದ 9 ತಿಂಗಳ ಹಸುಳೆ ಮೃತಪಟ್ಟಿರುವ ಘಟನೆ ತಾಲೂಕಿನ ಹಲಸಿನಕೊಪ್ಪಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಉಳವಿ ಹೋಬಳಿಯ ಹಲಸಿನಕೊಪ್ಪಗ್ರಾಮದ ಮಂಜಪ್ಪಎಂಬವರ ಪತ್ನಿ ನೇತ್ರಾ(32) ಹಾಗೂ 9 ತಿಂಗಳ ಹೆಣ್ಣು ಮಗು ಸಂಜನಾ ಎಂದು ಗುರುತಿಸಲಾಗಿದೆ.
ಮೃತ ನೇತ್ರಾ ಅವರಿಗೆ ಕೆಲ ಸಮಯದಿಂದ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದು ವಿಷ ಸೇವಿಸಿದ್ದರು. ವಿಷ ಕುಡಿದ ಬಳಿಕ 9 ತಿಂಗಳ ತನ್ನ ಮಗು ಸಂಜನಾಗೆ ಹಾಲು ಉಣಿಸಿದ ಕಾರಣ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





