ಕೆರೆಯಲ್ಲಿ ಪುರಾತನ ಕಾಲದ ಶಿವ-ಪಾರ್ವತಿಯರ ಕಂಚಿನ ವಿಗ್ರಹ ಪತ್ತೆ

ಶಿವಮೊಗ್ಗ, ಮಾ. 31: ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬರಿಗೆ ಗ್ರಾಮದ ಕೆರೆಯಲ್ಲಿ ಪುರಾತನ ಕಾಲದ ಶಿವ - ಪಾರ್ವತಿ ದೇವರ ಕಂಚಿನ ವಿಗ್ರಹ ಪತ್ತೆಯಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಕೃಷ್ಣಮೂರ್ತಿ ಎಂಬುವರಿಗೆ ಈ ವಿಗ್ರಹ ಸಿಕ್ಕಿದೆ. ಬೇಸಿಗೆಯ ಬಿಸಿಲಿನ ಕಾರಣದಿಂದ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಿತ್ತು. ಕೃಷ್ಣಮೂರ್ತಿಯವರು ಕೆರೆಗೆ ನೀರು ಹಾಯಿಸುವ ಕೆಲಸ ಮಾಡು ವೇಳೆ ಈ ವಿಗ್ರಹ ಸಿಕ್ಕಿದೆ.
ತಕ್ಷಣವೇ ಈ ವಿಷಯವನ್ನು ಗ್ರಾಮಸ್ಥರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ. ತಹಶೀಲ್ದಾರ್ ತುಷಾರ್ ಬಿ. ಹೊಸೂರುರವರಿಗೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ ವಿಗ್ರಹ ಸಿಕ್ಕಿರುವ ಕೆರೆಯ ದಂಡೆಯ ಮೇಲಿರುವ ರಾಮೇಶ್ವರ ದೇವರ ವಿಗ್ರಹ ಇದಾಗಿದೆ. ಈ ಹಿಂದೆ ಇದು ಕಳುವಾಗಿತ್ತು ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ.
ಸಾಗರ ತಹಶೀಲ್ದಾರ್ ತುಷಾರ ಬಿ. ಹೊಸೂರುರವರು ಮಾತನಾಡಿ, ಈ ವಿಗ್ರಹವನ್ನು ಶಿವಮೊಗ್ಗದ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಗುವುದುಎಂದು ತಿಳಿಸಿದ್ದಾರೆ.
Next Story





