Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನಾಮ್ ದೇಹವನು್ನ ಉತ್ತರ ಕೊರಿಯಕೆ್ಕ ನೀಡಿದ...

ನಾಮ್ ದೇಹವನು್ನ ಉತ್ತರ ಕೊರಿಯಕೆ್ಕ ನೀಡಿದ ಮಲೇಶ್ಯ

3 ಶಂಕಿತರೂ ವಾಪಸ್; ಪ್ಯಾಂಗ್‌ಯಾಂಗ್‌ನಲ್ಲಿದ್ದ ಮಲೇಶ್ಯನ್ನರು ಸ್ವದೇಶಕ್ಕೆ

ವಾರ್ತಾಭಾರತಿವಾರ್ತಾಭಾರತಿ1 April 2017 12:12 AM IST
share
ನಾಮ್ ದೇಹವನು್ನ ಉತ್ತರ ಕೊರಿಯಕೆ್ಕ ನೀಡಿದ ಮಲೇಶ್ಯ

ಗೆಲುವಿನ ನಗೆ ಬೀರಿದ ಉತ್ತರ ಕೊರಿಯ

ಕೌಲಾಲಂಪುರ, ಮಾ. 31: ಕೊನೆಗೂ ಉತ್ತರ ಕೊರಿಯದ ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿದ ಮಲೇಶ್ಯ, ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಹತ್ಯೆಗೀಡಾದ ಕಿಮ್ ಜಾಂಗ್ ನಾಮ್‌ರ ಮೃತದೇಹ ಮತ್ತು ಕೊಲೆಗೆ ಸಂಬಂಧಿಸಿ ಪ್ರಶ್ನಿಸಬೇಕೆಂದು ಬಯಸಿದ್ದ ಮೂವರು ಉತ್ತರ ಕೊರಿಯನ್ನರನ್ನು ಶುಕ್ರವಾರ ಅವರ ದೇಶಕ್ಕೆ ಕಳುಹಿಸಿಕೊಟ್ಟಿದೆ.

ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯದಲ್ಲಿ ಬಂಧಿಯಾಗಿದ್ದ ಮಲೇಶ್ಯನ್ ಪ್ರಜೆಗಳನ್ನು ಮಲೇಶ್ಯ ವಾಪಸ್ ಪಡೆದಿದೆ.

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರ ಪರಿತ್ಯಕ್ತ ಸಹೋದರ ಕಿಮ್ ಜಾಂಗ್ ನಾಮ್‌ರನ್ನು ಉತ್ತರ ಕೊರಿಯದ ಗೂಢಚಾರರು ಹತ್ಯೆ ಮಾಡಿದ್ದಾರೆ ಎಂಬುದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ಹೇಳಿವೆ.

ಕೊಲೆಯ ಬಗ್ಗೆ ತನಿಖೆ ನಡೆಸುತ್ತಿರುವ ಮಲೇಶ್ಯ ಪೊಲೀಸರು, ಮೂವರು ಉತ್ತರ ಕೊರಿಯನ್ನರಿಂದ ಅವರು ದೇಶ ಬಿಡುವ ಮೊದಲು ಹೇಳಿಕೆಗಳನ್ನು ಪಡೆದುಕೊಂಡರು.

‘‘ಅವರಿಂದ ಏನು ಬೇಕೋ ಅದನ್ನು ನಾವು ಪಡೆದುಕೊಂಡಿದ್ದೇವೆ. ಅವರು ನಮಗೆ ಸಹಾಯ ಮಾಡಿದ್ದಾರೆ, ಹಾಗಾಗಿ ಅವರಿಗೆ ಹೋಗಲು ಅನುಮತಿ ನೀಡಲಾಗಿದೆ’’ ಎಂದು ಮಲೇಶ್ಯ ಪೊಲೀಸ್ ಮುಖ್ಯಸ್ಥ ಖಾಲಿದ್ ಅಬೂಬಕರ್ ಕೌಲಾಲಂಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು. ಅವರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ ಎಂದು ಹೇಳಿಕೊಂಡರು.

ಕಿಮ್ ಜಾಂಗ್ ನಾಮ್‌ರನ್ನು ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 13ರಂದು ವಿಎಕ್ಸ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕವನ್ನು ಬಳಸಿ ಇಬ್ಬರು ಮಹಿಳೆಯರು ಕೊಲೆ ಮಾಡಿದ್ದರು. ಈ ರಾಸಾಯನಿಕವನ್ನು ವಿಶ್ವಸಂಸ್ಥೆಯು ಸಮೂಹ ನಾಶಕ ಅಸ್ತ್ರಗಳ ಪಟ್ಟಿಗೆ ಸೇರಿಸಿರುವುದನ್ನು ಸ್ಮರಿಸಬಹುದಾಗಿದೆ.

ಹತ್ಯೆಯ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಮರ ತಾರಕಕ್ಕೇರಿದ ಬಳಿಕ ಒಂಬತ್ತು ಮಲೇಶ್ಯನ್ ಪ್ರಜೆಗಳನ್ನು ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಹಿಡಿದಿಟ್ಟುಕೊಳ್ಳಲಾಗಿತ್ತು.

ಅವರ ಬಿಡುಗಡೆಗೆ ಪ್ರತಿಯಾಗಿ ನಾಮ್ ಮೃತದೇಹವನ್ನು ಮಲೇಶ್ಯ ಗುರುವಾರ ಉತ್ತರ ಕೊರಿಯಕ್ಕೆ ಬಿಟ್ಟುಕೊಟ್ಟಿತ್ತು.

ಕೊಲೆಗೆ ಸಂಬಂಧಿಸಿ ಇಂಡೋನೇಶ್ಯ ಮತ್ತು ವಿಯೆಟ್ನಾಮ್‌ಗಳ ಇಬ್ಬರು ಮಹಿಳೆಯರನ್ನು ಮಲೇಶ್ಯ ಈಗಾಗಲೇ ಬಂಧಿಸಿದೆ. ಆದರೆ, ಅವರನ್ನು ಉತ್ತರ ಕೊರಿಯದ ಏಜಂಟರು ದಾಳಗಳಾಗಿ ಬಳಸಿಕೊಂಡಿದ್ದಾರೆ ಎಂಬುದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಏಕಕಾಲದಲ್ಲಿ ವಿಮಾನಗಳ ಹಾರಾಟ

ಪ್ಯಾಂಗ್‌ಯಾಂಗ್‌ನಲ್ಲಿ ಬಂಧಿಯಾಗಿದ್ದ ಒಂಬತ್ತು ಮಲೇಶ್ಯನ್ನರು ಶುಕ್ರವಾರ ಬೆಳಗ್ಗೆ ಮಲೇಶ್ಯ ವಾಯುಪಡೆಯ ಸಣ್ಣ ಬೊಂಬಾರ್ಡಿಯರ್ ವಿಮಾನವೊಂದರಲ್ಲಿ ಕೌಲಾಲಂಪುರದಲ್ಲಿ ಬಂದಿಳಿದರು.

ಈ ಹಾರಾಟಕ್ಕಾಗಿ ತನ್ನ ಸಿಬ್ಬಂದಿ ನಾಗರಿಕ ಉಡುಗೆಗಳನ್ನು ತೊಟ್ಟರು ಎಂದು ಪೈಲಟ್ ಹಸ್ರಿಝನ್ ಕಾಮಿಸ್ ಹೇಳಿದರು.

ನಾಮ್ ಮೃತದೇಹ ಮತ್ತು ಉತ್ತರ ಕೊರಿಯನ್ನರನ್ನು ಬೀಜಿಂಗ್ ಮೂಲಕ ಉತ್ತರ ಕೊರಿಯಕ್ಕೆ ಕಳುಹಿಸಿಕೊಡಲಾಗಿದೆ.

ಪ್ಲೇನ್ ಫೈಂಡರ್ ಟ್ರಾಕಿಂಗ್ ವೆಬ್‌ಸೈಟ್ ಪ್ರಕಾರ, ಮೃತದೇಹ ಮತ್ತು ಉತ್ತರ ಕೊರಿಯನ್ನರನ್ನು ಹೊತ್ತ ಮಲೇಶ್ಯನ್ ಏರ್‌ಲೈನ್ಸ್ ವಿಮಾನ ಕೌಲಾಂಪುರದಿಂದ ಬೀಜಿಂಗ್‌ಗೆ ಹೊರಟ ಕ್ಷಣದಲ್ಲೇ ಬೊಂಬಾರ್ಡಿಯರ್ ವಿಮಾನ ಪ್ಯಾಂಗ್‌ಯಾಂಗ್‌ನಿಂದ ಹಾರಾಟ ಆರಂಭಿಸಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X