Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಗದ್ದರ್ ಶರಣಾದುದು ಯಾರಿಗೆ?

ಗದ್ದರ್ ಶರಣಾದುದು ಯಾರಿಗೆ?

ವಾರ್ತಾಭಾರತಿವಾರ್ತಾಭಾರತಿ1 April 2017 12:15 AM IST
share

ಹೌದು, ಗದ್ದರ್ ಮತ್ತೊಮ್ಮೆ ಶರಣಾಗಿದ್ದಾರೆ. ಆದರೆ ಈ ಬಾರಿಯ ಶರಣಾಗತಿ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿದೆ. ಈ ಹಿಂದೆ ಭೂಗತ ಬದುಕಿನಿಂದ ಹೊರ ಬಂದು, ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಜನರ ನಡುವೆ ಅವರು ಚಳವಳಿಯನ್ನು ಮುಂದುವರಿಸಿದಾಗ ಬಹಳಷ್ಟು ಪ್ರಗತಿ ಪರ ನಾಯಕರು ಗದ್ದರ್ ಧ್ವನಿಗೆ ಧ್ವನಿಯನ್ನು, ಹೆಜ್ಜೆಗೆ ಹೆಜ್ಜೆಯನ್ನು ಸೇರಿಸಿದ್ದರು. ಆದರೆ ಈ ಬಾರಿಯ ಶರಣಾಗತಿ ಮಾತ್ರ ಜನಚಳವಳಿಯ ಮುಂಚೂಣಿಯಲ್ಲಿರುವ ನಾಯಕರಲ್ಲಿ ಗಾಢ ವಿಷಾದವನ್ನು ತುಂಬಿದೆ. ತಮ್ಮ ಶರಣಾಗತಿಯನ್ನು ಸ್ಪಿರಿಚುವಲ್ ಡೆಮಾಕ್ರಸಿಯ ಪ್ರಸ್ತುತತೆಯನ್ನು ಮುಂದಿಟ್ಟುಕೊಂಡು ಗದ್ದರ್ ಸಮರ್ಥಿಸುತ್ತಿದ್ದಾರೆ. ಆದರೆ ಅವರ ಸದ್ಯದ ನಡೆಯಲ್ಲಿ ಸ್ಪಿರಿಚುವಲ್ ಮತ್ತು ಡೆಮಾಕ್ರಸಿ ಎರಡೂ ಅಂಶಗಳೂ ಕಾಣುತ್ತಿಲ್ಲ. ಬದಲಿಗೆ ಅವೆರಡರ ವಿರುದ್ಧ ದಿಕ್ಕಿನಲ್ಲಿ ಗದ್ದರ್ ನಿಂತಿದ್ದಾರೆ.

ಆಂಧ್ರದ ನಕ್ಸಲ್ ಚಳವಳಿ ಕಾಡಿನೊಳಗೆ ದಿಕ್ಕು ತಪ್ಪಿ ಅಂಡಲೆಯುತ್ತಿದ್ದಾಗ, ಆ ಚಳವಳಿಯನ್ನು ಜನಚಳವಳಿಯಾಗಿ ರೂಪಿಸಲು ಗದ್ದರ್ ನೀಡಿದ ಕೊಡುಗೆಯನ್ನು ನಾವು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಜನನಾಟ್ಯ ಮಂಚ್ ಮೂಲಕ ಕಾಲಿಗೆ ಗೆಜ್ಜೆ ಕಟ್ಟಿ ಬೀದಿ ಬೀದಿಗಳಲ್ಲಿ ನರ್ತಿಸಿ ಜನಜಾಗೃತಿಯ ಹಾಡುಗಳನ್ನು ಹಾಡಿ ದಲಿತರನ್ನು, ದಮನಿತರನ್ನು ಒಂದಾಗಿಸಲು ಪ್ರಯತ್ನಿಸಿದರು. ಮುಖ್ಯ ವಾಹಿನಿಗೆ ಕಾಲಿಟ್ಟ ಬಳಿಕವೂ, ನಕ್ಸಲರ ಮತ್ತು ಪ್ರಜಾಸತ್ತೆಯ ನಡುವೆ ಸೇತುವೆಯಾಗಲು ಪ್ರಯತ್ನಿಸಿದರು. ಆ ಬಳಿಕ ಹಲವರನ್ನು ಮುಖ್ಯವಾಹಿನಿಗೆ ತರುವಲ್ಲೂ ಅವರು ಮಹತ್ತರ ಪಾತ್ರ ವಹಿಸಿದರು. ಕಮ್ಯುನಿಸಂನ ಒಣ ಸಿದ್ಧಾಂತಕ್ಕಷ್ಟೇ ಕಟ್ಟು ಬೀಳದೆ, ನೆಲದ ಗಮದ ಮೂಲಕ ಹೋರಾಟಕ್ಕೆ ಹೊಸ ಹುರುಪನ್ನು ನೀಡಿದವರು ಗದ್ದರ್.

ನಕ್ಸಲರ ಹಿಂಸೆಯ ಹೋರಾಟವನ್ನು ತಿರಸ್ಕರಿಸುವವರೂ ಗದ್ದರ್‌ನ ಚಳವಳಿಗೆ ಮಾರು ಹೋದವರಿದ್ದಾರೆ. ಇಂತಹ ಗದ್ದರ್ ಮುಂದೆ ಸಿನೆಮಾಗಳಿಗೆ ಹಾಡುಗಳನ್ನು ಬರೆದರು, ಹಾಡಿದರು. ಇದಕ್ಕೂ ಕೆಲವರು ಭಿನ್ನಮತ ವ್ಯಕ್ತಪಡಿಸಿದ್ದಿದೆ. ಆದರೆ ಈ ದೇಶದ ಬಹುದೊಡ್ಡ ಜನಸಮೂಹದ ನಡುವೆ ಸೇತುವೆಯಾಗಿ ನಿಂತಿರುವ ಸಿನೆಮಾಗಳನ್ನು ಒಬ್ಬ ಹೋರಾಟಗಾರ ಯಾಕೆ ಬಳಸಿಕೊಳ್ಳಬಾರದು? ಎಂಬ ಪ್ರಶ್ನೆ ಹಾಕಿ, ಗದ್ದರ್‌ನನ್ನು ಜನಪರ ಹೋರಾಟಗಾರರು ಸಮರ್ಥಿಸಿಕೊಂಡಿದ್ದರು. ಸದ್ಯದ ಭಾರತದ ಸಂದರ್ಭದಲ್ಲಿ ಹೋರಾಟದ ಸಿದ್ಧ ದಾರಿಗಳಾಚೆಗೆ ಜನರಿರುವ ಎಡೆಗೆ ನಮ್ಮ ಹಾದಿಯನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ಕಾಲಕ್ಕೆ ತಕ್ಕಂತೆ ಗದ್ದರ್ ಅದನ್ನು ಮಾಡಿಯೂ ಇದ್ದಾರೆ.

ಅನೇಕ ಸಂದರ್ಭದಲ್ಲಿ ಅವರ ಈ ಹೆಜ್ಜೆಗಳಲ್ಲಿ ಸಮಯಸಾಧಕತನವನ್ನೂ ಗುರುತಿಸಿದವರಿದ್ದಾರೆ. ಪ್ರಭುತ್ವದ ಜೊತೆಗೆ ನಿಧಾನಕ್ಕೆ ರಾಜಿಯಾಗುತ್ತಾ ಬರುತ್ತಿದ್ದಾರೆ ಎಂಬ ಟೀಕೆಗೂ ಗದ್ದರ್ ಒಳಗಾಗಿದ್ದಾರೆ. ಆದರೆ ಜನಪರ ಹೋರಾಟಗಾರರ ಎಲ್ಲ ತರ್ಕಗಳನ್ನು ಬುಡಮೇಲುಗೊಳಿಸುವಂತೆ ಗದ್ದರ್ ಇದೀಗ ಆಘಾತಕಾರಿ ನಡೆಯೊಂದನ್ನು ಇಟ್ಟಿದ್ದಾರೆ. ಅವರೀಗ ಆಂಧ್ರ ಬೃಹತ್ ದೇವಸ್ಥಾನಗಳಿಗೆ ಹೋಗಿ ಅರ್ಚನೆಯನ್ನು ಆರಂಭಿಸಿದ್ದಾರೆ. ನಾಡಿಗಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಒಂದಾನೊಂದು ಕಾಲದಲ್ಲಿ ಪುರೋಹಿತ ಶಾಹಿ ವ್ಯವಸ್ಥೆಯ ವಿರುದ್ಧ ಖಂಡತುಂಡವಾಗಿ ವಾದಿಸುತ್ತಿದ್ದ ಗದ್ದರ್ ಅದೇ ಪುರೋಹಿತರಿಗೆ ಮಂಡಿಯೂರಿ ಅವರಿಂದ ಪ್ರಸಾದ ಸ್ವೀಕರಿಸುತ್ತಿದ್ದಾರೆ ಮತ್ತು ಇದನ್ನು ‘ಸ್ಪಿರಿಚುವಲ್ ಡೆಮಾಕ್ರಸಿ’ ಎಂದು ಕರೆದು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ. ನಿಜ. ತನ್ನ ಸುದೀರ್ಘ ಹೋರಾಟದ ಹಾದಿಯಲ್ಲಿ ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಮುಖಾಮುಖಿಯಾಗುವ ಸಂದರ್ಭದಲ್ಲಿ, ಅಧ್ಯಾತ್ಮದ ಹೊಳಹುಗಳು ಹೊಸ ರೂಪದಲ್ಲಿ ಅವರನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಒಬ್ಬ ನಾಸ್ತಿಕನಾದವನು ತನ್ನ ಸುದೀರ್ಘ ಸಂಘರ್ಷದ ಹಾದಿಯಲ್ಲಿ ಆಸ್ತಿಕನಾಗಿ ಬದಲಾಗುವುದು ಅಚ್ಚರಿಯೇನೂ ಅಲ್ಲ. ಹಾಗೆ ನೋಡಿದರೆ, ಈ ವಿಶ್ವದ ಬಹುದೊಡ್ಡ ಆಂದೋಲನಗಳೆಲ್ಲ ನಡೆದಿರುವುದು ದೇವರ ನಂಬಿಕೆಯ ಮೂಲಕವೇ ಆಗಿದೆ. ಜೀಸಸ್, ಪ್ರವಾದಿ ಮುಹಮ್ಮದ್, ಬಸವಣ್ಣ, ನಾರಾಯಣ ಗುರು ಮೊದಲಾದವರು ಅಧ್ಯಾತ್ಮದ ಮೂಲಕವೇ ಸಾಮಾಜಿಕ ಚಳವಳಿಯನ್ನು ರೂಪಿಸಿದರು. ಅವರ ಅಂತಿಮ ಕಾಳಜಿ ಮನುಷ್ಯನ ಕುರಿತಂತೆಯೇ ಆಗಿತ್ತು. ಬಡ್ಡಿ ನಿಷೇಧ, ಜಾತಿ ವಿನಾಶ, ಮದ್ಯ ನಿಷೇಧ, ಸಹೋದರತೆ, ಸಮಾನತೆಯ ಕಲ್ಪನೆಯನ್ನು ದೇವರ ನಂಬಿಕೆಯ ಜೊತೆ ಜೊತೆಗೇ ಜನರ ನಡುವೆ ಹರಡಿದರು ಮತ್ತು ಅದರಲ್ಲಿ ಭಾಗಶಃ ಯಶಸ್ಸನ್ನೂ ಪಡೆದರು.

ಹೀಗಿರುವಾಗ, ಗದ್ದರ್ ‘ಆಧ್ಯಾತ್ಮಿಕ ಪ್ರಜಾಸತ್ತೆ’ಯ ಬಗ್ಗೆ ಮಾತನಾಡಿದರೆ ನಾವು ಅದನ್ನು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ. ಆದರೆ ಸಮಾನತೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಗದ್ದರ್‌ನ ದೇವರ ನಂಬಿಕೆ ಅವರನ್ನು ಮತ್ತೆ ಗುಲಾಮತನಕ್ಕೆ ತಳ್ಳುವಂತಾಗಬಾರದು. ದೇವರ ನಂಬಿಕೆ ಮನುಷ್ಯ ಮನುಷ್ಯರ ನಡುವಿನ ಭೇದಗಳನ್ನು ಅಳಿಸುವಂತಿರಬೇಕು. ದೇವರ ನಂಬಿಕೆ ಮನುಷ್ಯನ ನಡುವಿನ ಮೇಲು ಕೀಳುಗಳನ್ನು ನಿವಾರಿಸುವಂತಿರಬೇಕು. ಕಮ್ಯುನಿಸಂ ದೇವರನ್ನು ಯಾಕೆ ಸಾರಾಸಗಟಾಗಿ ನಿರಾಕರಿಸಿತು ಎನ್ನುವುದನ್ನು ನಾವು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಅಲ್ಲಿನ ಚರ್ಚುಗಳು ಕಾರ್ಮಿಕರ ಮೇಲೆ ನಡೆಸಿದ ವ್ಯಾಪಕ ಶೋಷಣೆ ಅಂತಿಮವಾಗಿ ಹೋರಾಟಗಾರರಿಗೆ ದೇವರನ್ನೇ ನಿರಾಕರಿಸುವಂತಹ ಸನ್ನಿವೇಶವನ್ನು ಸೃಷ್ಟಿಸಿತು. ರೈತರು, ಕೂಲಿ ಕಾರ್ಮಿಕರನ್ನು ದಮನಿಸಲು ಪ್ರಭುತ್ವ, ಪುರೋಹಿತ ಶಾಹಿ ವ್ಯವಸ್ಥೆಯನ್ನು ಬಳಸಿದ ಹಿನ್ನೆಲೆಯಲ್ಲಿ ಇದು ಸಂಭವಿಸಿತು.

ಈ ದೇಶದ ಮಹಾ ಆಸ್ತಿಕರೆೆಂದು ಗುರುತಿಸಿಕೊಂಡಿರುವ ಮಹಾತ್ಮಗಾಂಧೀಜಿ ಎಂದಿಗೂ ಪುರೋಹಿತ ಶಾಹಿವ್ಯವಸ್ಥೆಗೆ ಅಡ್ಡ ಬಿದ್ದವರಲ್ಲ. ಯಾವುದೇ ದೇವಸ್ಥಾನಗಳಲ್ಲಿ ಅರ್ಚನೆ ಮಾಡಿದವರಲ್ಲ. ದಲಿತರಿಗೆ ಪ್ರವೇಶವಿಲ್ಲದ ದೇವಸ್ಥಾನದೊಳಗೆ ತಾನು ಪ್ರವೇಶಿಸುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಗದ್ದರ್‌ನ ದೇವರು, ಅಧ್ಯಾತ್ಮ ಪ್ರಶ್ನಾರ್ಹವಾಗುವುದೇ ಇಲ್ಲಿ. ಅಸ್ಪಶ್ಯತೆಯನ್ನು ಇನ್ನೂ ಆಚರಿಸಿಕೊಳ್ಳುತ್ತಿರುವ ದೇವಸ್ಥಾನದೊಳಗೆ ಅವರು ದೇವರನ್ನು ಹುಡುಕುತ್ತಿದ್ದಾರೆ. ವೈದಿಕ ವೌಲ್ಯಗಳು ಕೆಳಜಾತಿ, ಕೆಳವರ್ಗಗಳನ್ನು ಮೇಲ್ಜಾತಿ, ಮೇಲ್ ವರ್ಗಗಳಿಗೆ ತಲೆಬಾಗಿಸುವ ವೃತ್ತಿಯನ್ನು ಮಾಡಿಕೊಂಡು ಬಂದಿದೆ. ತನ್ನನ್ನು ತಾನು ದಲಿತ ಎಂದು ಹೇಳಿಕೊಂಡಿರುವ ಗದ್ದರ್‌ಗೆ ವೈದಿಕ ಹುನ್ನಾರಗಳನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಪೂಜೆಯ ಹೆಸರಿನಲ್ಲಿ ಮಾಡಿರುವ ಹಾಲು ಅರ್ಚನೆಗಳು ಯಾವ ಸಮಾನತೆಯ ವೌಲ್ಯವನ್ನೂ ಎತ್ತಿ ಹಿಡಿಯುವುದಿಲ್ಲ. ದೇವಸ್ಥಾನವೊಂದರಲ್ಲಿ ಗದ್ದರ್ ಮಂಡಿಯೂರಿ ಕುಳಿತು ಅರ್ಚಕನ ಕೈಯಿಂದ ಪ್ರಸಾದ ಸ್ವೀಕರಿಸುವ ಭಾವಚಿತ್ರ ಇಂದು ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿವೆ.

ಇವು ಮೇಲು-ಕೀಳುಗಳನ್ನು ಎತ್ತಿ ಹಿಡಿದಿದೆಯೇ ಹೊರತು, ಗದ್ದರ್ ಹೇಳುವ ಸ್ಪಿರಿಚುವಲ್ ಡೆಮಾಕ್ರಸಿ ಅಲ್ಲಿಲ್ಲ. ಆ ಚಿತ್ರ ಸಾರಿ ಸಾರಿ ಹೇಳುತ್ತಿದೆ, ಗದ್ದರ್ ಶರಣಾಗಿರುವುದು, ದೇವರಿಗಲ್ಲ, ಪುರೋಹಿತಶಾಹಿ ವ್ಯಕ್ತಿತ್ವಕ್ಕೆ. ಪ್ರಭುತ್ವದ ಲಾಲಸೆಗೆ. ತಾನೇ ಕಟ್ಟಿ ಬೆಳೆಸಿದ ಒಂದು ದೊಡ್ಡ ಚಳವಳಿಯನ್ನು ಆ ವ್ಯವಸ್ಥೆಗೆ ಬಲಿಕೊಡಲು ಹೊರಟಿದ್ದಾರೆ. ಈ ಮೂಲಕ ಗದ್ದರ್, ಜನಹೋರಾಟದ ಪಾಲಿನ ಗದ್ದಾರ್ ಆಗಲು ಹೊರಟಿದ್ದಾರೆ. ಗದ್ದರ್ ಹಾಡುಗಳ ಮೋಡಿಗೆ ಬಲಿಯಾಗಿ ಕೋವಿ ಹಿಡಿದು ಕಾಡಿನ ಹಾದಿ ಹಿಡಿದು ರಕ್ತದ ಮಡುವಿನಲ್ಲಿ ಬದುಕನ್ನು ಮುಗಿಸಿದ ಅಮಾಯಕ ತರುಣರ ತ್ಯಾಗವನ್ನು ನಗದೀಕರಿಸಲು ಹೊರಟಿರುವ ಗದ್ದರ್ ಅವರನ್ನು ಇತಿಹಾಸ ಎಂದಿಗೂ ಕ್ಷಮಿಸದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X