ಸಿದ್ಧಗಂಗಾ ಶ್ರೀಗಳ 110ನೆ ಜನ್ಮದಿನೋತ್ಸವ

ತುಮಕೂರು , ಎ.1: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಯವರ 110ನೇ ವರ್ಷದ ಜನ್ಮದಿನೋತ್ಸವ ಶನಿವಾರ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುತ್ತಿದ್ದು, ರಾಜಕೀಯ ರಂಗ,ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತಾಭಿಮಾನಿಗಳು ಮಠಕ್ಕೆ ಆಗಮಿಸಿ ಸಿದ್ಧಗಂಗಾ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.
ಬೆಳಗಿನ ಜಾವ ಶಿವಪೂಜೆ ಮುಗಿಸಿಕೊಂಡು ಮಠದಿಂದ ಶ್ರೀಗಳನ್ನು ಮಂಗಳವಾದ್ಯ, ಪೂರ್ಣಕುಂಭ ಸ್ವಾಗತ ನೀಡಲಾಯಿತು.
ನೂರಾರು ಮಠಾಧೀಶರಿಂದ ಸಾಮೂಹಿಕ ಪಾದಪೂಜೆ, ಪುಷ್ಪಾರ್ಚನೆ ನಡೆಯಿತು.
ಜನ್ಮದಿನೋತ್ಸವ ಅಂಗವಾಗಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ,ರಾಜ್ಯಪಾಲ ವಜೂಭಾಯಿ ವಾಲಾ ಉಪಸ್ಥಿತಿಯಲ್ಲಿ ಆರಂಭಗೊಂಡ ಕಾರ್ಯಕ್ರಮಕ್ಕೆ 110 ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಮಧ್ಯಾಹ್ನ 2.30ಕ್ಕೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ.ಸಂಜೆ 6 ಗಂಟೆಗೆ ಶ್ರೀಗಳಿಗೆ ನಗರದ ನಾಗರಿಕರ ಪರವಾಗಿ ಗುರುವಂದನೆ ಆಯೋಜಿಸಲಾಗಿದೆ.
Next Story





