"ಎಂಎಲ್‌ಎಗಳನ್ನು ಖರೀದಿಸಿದ ಗಡ್ಕರಿಗೆ ಧನ್ಯವಾದ ಹೇಳಿ": ಗೋವಾ ಸಿಎಂ ಪಾರಿಕ್ಕರ್‌ಗೆ ದಿಗ್ವಿಜಯ್ ಸಿಂಗ್ ತಿರುಗೇಟು

ಹೊಸದಿಲ್ಲಿ, ಎ.1: ಮತದಾರರ ತೀರ್ಪಿಗೆ ವಿರುದ್ಧವಾಗಿ ಗೋವಾದಲ್ಲಿ ಮುಖ್ಯ ಮಂತ್ರಿಯಾಗಿರುವ ನೀವು ರಾಜ್ಯದ ಜನತೆಗೆ ಮೋಸ ಮಾಡಿದಕ್ಕಾಗಿ ಅವರಲ್ಲಿ ಕ್ಷಮೆ ಕೇಳಿ ಎಂದು ಮುಖ್ಯ ಮಂತ್ರಿ ಮನೋಹರ್ ಪಾರಿಕ್ಕರ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಮುಖ್ಯ ಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ನನಗೆ ಧನ್ಯವಾದ ಹೇಳುವುದು ಬೇಡ. ನೀವು ಯಾರಿಗಾದರೂ ಧನ್ಯವಾದ ಹೇಳುವುದಿದ್ದರೆ ನಿಮ್ಮನ್ನು ಮುಖ್ಯ ಮಂತ್ರಿಯಾಗಿ ಮಾಡಲು "ಆಕ್ರಮಣಕಾರಿ ಶಾಸಕ ಖರೀದಿ" ವ್ಯವಹಾರವನ್ನು ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಡಕರಿಗೆ ಧನ್ಯವಾದ ಸಲ್ಲಿಸಿ” ಎಂದು ಹೇಳಿದ್ದಾರೆ.
"ನಿಮ್ಮ ಅಧಿಕಾರದ ಹಸಿವಿಗೆ ನಿಮಗೆ ನಾಚಿಕೆಯಾಗಬೇಕು ಪಾರಿಕ್ಕರ್. ನೀವು ಗೋವಾದ ಜನತೆಗೆ ಮೋಸ ಮಾಡಿದ್ದೀರಿ. ಗೋವಾ ಜನರಲ್ಲಿ ಕ್ಷಮೆ ಯಾಚಿಸಿ ” ಎಂದು ಟ್ವೀಟರ್ ನಲ್ಲಿ ದಿಗ್ವಿಜಯ ಸಿಂಗ್ ಸಲಹೆ ನೀಡಿದ್ದಾರೆ.
ಗರಿಷ್ಠ ಸೀಟ್ ಗಳನ್ನು ಗೆದ್ದರೂ ಸರಕಾರ ರಚಿಸುವಲ್ಲಿ ವಿಫಲರಾದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಧನ್ಯವಾದಗಳನ್ನು ಹೇಳಿದ್ದರು.
ಶುಕ್ರವಾರ ಶೂನ್ಯ ಅವಧಿಯಲ್ಲಿ ರಾಜ್ಯಸಭೆಗೆ ಭೇಟಿ ನೀಡಿದದ್ದ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಅವರು " ನನಗೆ ಮುಖ್ಯ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟ ದಿಗ್ವಿಜಯ್ ಸಿಂಗ್ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಹೇಳುತ್ತೇನೆ. ಗೋವಾದಲ್ಲಿ ನಡೆದ ಬೆಳವಣಿಗೆಗಳು ನಮಗೆ ಸರಕಾರ ರಚಿಸಲು ಸಾಧ್ಯವಾಯಿತು. ಸಣ್ಣ ಹಾಗೂ ಸ್ವತಂತ್ರ ಪಕ್ಷಗಳು ನಮಗೆ ಬೆಂಬಲ ನೀಡಿದವು. ಇದೊಂದು ಸಮ್ಮಿಶ್ರ ಸರಕಾರವಾಗಿದೆ ” ಎಂದು ಪಾರಿಕ್ಕರ್ ಹೇಳಿದ್ದರು.
ಪಾರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ" ಗೋವಾ ಗವರ್ನರ್ ಸಂವಿಧಾನವನ್ನು . ಸರ್ಕಾರಿಯಾ ಆಯೋಗದ ಮಾರ್ಗಸೂಚಿ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದರು. ಗೋವಾ ಜನತೆ ನೀಡಿದ್ದ ಜನಾದೇಶವನ್ನು ಕಿತ್ತುಕೊಳ್ಳಲಾಯಿತು ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ.





