11 ವರ್ಷಗಳ ಹಿಂದೆ ವ್ಯಕ್ತಿ ನುಂಗಿದ್ದ ಬಲ್ಬ್ ಹೊರತೆಗೆದ ವೈದ್ಯರು !

ರಿಯಾದ್, ಎ.1: ಸೌದಿಯ ಪೂರ್ವ ಅಲ್-ಅಹ್ಸ ಪ್ರಾಂತದ ಆಸ್ಪತ್ರೆಯೊಂದರ ವೈದ್ಯರು 21 ವರ್ಷದ ವ್ಯಕ್ತಿಯೊಬ್ಬ 11 ವರ್ಷಗಳ ಹಿಂದೆ ನುಂಗಿದ್ದ ಬಲ್ಬ್ ಒಂದನ್ನು ಆತನ ಹೊಟ್ಟೆಯಿಂದ ಶಸ್ತ್ರಕ್ರಿಯೆಯ ಮೂಲಕ ಹೊರತೆಗೆದಿದ್ದಾರೆ.
ಆ ವ್ಯಕ್ತಿ ತೀವ್ರ ಆಯಾಸ, ವಾಕರಿಕೆ ಅನುಭವ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾತ್ತು. ವಿವಿಧ ತಪಾಸಣೆಗಳನ್ನು ನಡೆಸಿದ್ದ ವೈದ್ಯರು ಕೊನೆಗೆ ಆತನ ಹೊಟ್ಟೆಯಲ್ಲಿ ಒಂದು ವಿಚಿತ್ರ ವಸ್ತು ಇರುವುದನ್ನು ಗಮನಿಸಿದ್ದರು.
ಆತನನ್ನು ಕೂಡಲೇ ಶಸ್ತ್ರಕ್ರಿಯೆ ಕೊಠಡಿಗೆ ಕೊಂಡೊಯ್ದು ಶಸ್ತ್ರಕ್ರಿಯೆ ನಡೆಸಿ ಆತನ ಹೊಟ್ಟೆಯಿಂದ ಹಗುರವಾದ ಬಲ್ಬ್ ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ತಾನು ಹತ್ತು ವರ್ಷದವನಿರುವಾಗ ಈ ಬಲ್ಬ್ ನುಂಗಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ಶಸ್ತ್ರಕ್ರಿಯೆ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ನಡೆದಿತ್ತು. ರೋಗಿ ಈಗ ಆರೋಗ್ಯದಿಂದಿದ್ದು, ಕೆಲವೇ ದಿನಗಳಲ್ಲಿ ಆತನನ್ನು ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
Next Story





