16 ರಾಜ್ಯಗಳ 100 ಸ್ಥಳಗಳಲ್ಲಿ ಬೇನಾಮಿ ಕಂಪನಿಗಳ ವಿರುದ್ಧ ಇಡಿ ದಾಳಿ

ಹೊಸದಿಲ್ಲಿ,ಎ.1: ಬೇನಾಮಿ ಕಂಪನಿಗಳ ವಿರುದ್ಧ ತನ್ನ ಕಾರ್ಯಾಚರಣೆಯ ಅಂಗವಾಗಿ ಶನಿವಾರ ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸಿದ ಜಾರಿ ನಿರ್ದೇಶನಾಲಯ (ಇಡಿ)ವು 16 ರಾಜ್ಯಗಳ 100 ಸ್ಥಳಗಳಲ್ಲಿ ಶೋಧಗಳನ್ನು ನಡೆಸಿದೆ.
ಇಡಿಯ ಹಲವಾರು ತಂಡಗಳು ದಿಲ್ಲಿ, ಚೆನ್ನೈ, ಕೋಲ್ಕತಾ, ಚಂಡಿಗಡ, ಪಟ್ನಾ, ರಾಂಚಿ, ಅಹ್ಮದಾಬಾದ್, ಭುವನೇಶ್ವರ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸುಮಾರು 300 ಬೇನಾಮಿ ಕಂಪನಿಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದರು.
ಹಣ ಚಲುವೆ ಮತ್ತು ಅಕ್ರಮ ವಿದೇಶಿ ವಿನಿಮಯ ವಹಿವಾಟುಗಳನ್ನು ಪತ್ತೆ ಹಂಚಲು ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಪ್ರಧಾನಿ ಕಚೇರಿಯ ನಿರ್ದೇಶದ ಮೇರೆಗೆ ಇತ್ತೀಚಿಗೆ ರಚಿಸಲಾಗಿರುವ ವಿಶೇಷ ಕಾರ್ಯಪಡೆ (ಸಿಟ್)ಯ ಆದೇಶದಂತೆ ಇಡಿ ಬೇನಾಮಿ ಕಂಪನಿಗಳ ಮೇಲೆ ಮುಗಿ ಬಿದ್ದಿದೆ.
ಇಡಿ ಇತ್ತೀಚಿಗಷ್ಟೇ ಒಂದು ವಾರದ ಅವಧಿಯಲ್ಲಿ ಇಂತಹ ಬೇನಾಮಿ ಕಂಪನಿಗಳಿಗೆ ಸೇರಿದ ಕೋಟ್ಯಂತರ ರೂ.ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು.
Next Story





