ಮೋಹನ್ ಭಾಗವತ್ ರಾಷ್ಟ್ರಪತಿಯಾಗಲಿ: ಜಾಫರ್ ಶರೀಫ್

ಬೆಂಗಳೂರು,ಎ.1: ಕಾಂಗ್ರೆಸ್ ಪಕ್ಷದ ನಿಲುವಿಗೆ ವಿರುದ್ಧವಾಗಿ ಹೆಜ್ಜೆ ಇರಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜಾಫರ್ ಶರೀಫ್ ಅವರು ಆರ‍್ ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರನ್ನು ರಾಷ್ಟ್ರಪತಿ ಹುದ್ದೆಗೆ ನೇಮಕ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
"ಮೋಹನ್ ಭಾಗವತ್ ರಾಷ್ಟ್ರಪತಿಯಾಗಲು ಅರ್ಹರಿದ್ದಾರೆ. ಅವರು ರಾಷ್ಟ್ರಪತಿಯಾದರೆ ತಪ್ಪೇನಿಲ್ಲ ” ಎಂದು ಹೇಳಿರುವ ಜಾಫರ್ ಶರೀಫ್ ಅವರ ರಾಷ್ಟ್ರಪ್ರೇಮ, ದೇಶದ ಜನರ ಬಗ್ಗೆ ಅವರಿಗಿರುವ ಕಾಳಜಿ ಪ್ರಶ್ನಾತೀತವಾಗಿದೆ ಎಂದು ಹೇಳಿದ್ದಾರೆ.
ಮೋಹನ್ ಭಾಗವತ್ ಅವರು ರಾಷ್ಟ್ರಪತಿ ಹುದ್ದೆಗೆ ಸರಿಯಾದ ಆಯ್ಕೆ ಎಂದು ಶಿವಸೇನಾ ಎಂಪಿ ಸಂಜಯ್ ರಾವುತ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
Next Story





