ಸೇನಾ ವಾಹನಗಳ ಮೇಲೆ ಉಗ್ರರ ಗುಂಡಿನ ದಾಳಿ; ಇಬ್ಬರು ಸೈನಿಕರಿಗೆ ಗಾಯ

ಶ್ರೀನಗರ,ಎ.1: ಇಲ್ಲಿಯ ಪಾರಿಂಪೋರ-ಪಂತಚೌಕ್ ಬೈಪಾಸ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರ ಸಮೀಪ ಶನಿವಾರ ಸೇನಾ ವಾಹನಗಳ ಸಾಲಿನ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.
ಬೆಮಿನಾದ ಎಸ್‌ಕೆಐಎಂಎಸ್ ಆಸ್ಪತ್ರೆಯ ಸಮೀಪ ಮಧ್ಯಾಹ್ನ 1.15ರ ಸುಮಾರಿಗೆ ಈ ದಾಳಿ ನಡೆದಿದೆ ಎಂದು ತಿಳಿಸಿದ ಅವರು, ಸಾಲಿನಲ್ಲಿದ್ದ ಕೊನೆಯ ಸೇನಾ ವಾಹನಕ್ಕೆ ಉಗ್ರರು ಹಾರಿಸಿದ್ದ ಗುಂಡುಗಳು ಬಡಿದಿದ್ದು, ಯೋಧರು ಪ್ರತಿದಾಳಿ ನಡೆಸಿದಾಗ ಉಗ್ರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಉಗ್ರರ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
Next Story





