ಸೌದಿ ಅರೇಬಿಯ: 2 ಹರಮ್ ಗಳಿಗೆ ಖರ್ಜೂರ, ಫ್ಲಾಸ್ಕ್ ಕೊಂಡು ಹೋಗಲು ಹೊಸ ಬ್ಯಾಗ್‌ಗಳು

ಜಿದ್ದ, ಎ.1: ಹರಮ್‌ನೊಳಕ್ಕೆ ಕಹ್ವ ಫ್ಲಾಸ್ಕ್ , ಖರ್ಜೂರಗಳನ್ನು ಕೊಂಡುಹೋಗಲು ಹೊಸ ಬ್ಯಾಗ್‌ಗಳನ್ನು ಎರಡು ಹರಮ್ ಗಳ ಕಾರ್ಯಾಲಯ ಸಿದ್ಧಪಡಿಸಿದೆ.
ಹೊಸ ರೂಪದಲ್ಲಿರುವ ಬ್ಯಾಗ್‌ನ ಉದ್ಘಾಟನೆಯನ್ನು ಎರಡು ಹರಮ್‌ಗಳ ಕಾರ್ಯಾಲಯಗಳ ಮುಖ್ಯಸ್ಥ ಡಾ. ಅಬ್ದುರ್ರಹ್ಮಾನ್ ಅಲ್ ಸುದೈಸ್ ನಿರ್ವಹಿಸಿದರು.
ಹೊಸ ಬ್ಯಾಗ್‌ಗಳನ್ನು ಹರಮ್ ಪ್ರವೇಶ ದ್ವಾರದಲ್ಲಿ ಉಚಿತವಾಗಿ ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಾರ್ಥಿಗಳುಮತ್ತು ಸಂದರ್ಶಕರಿಗೆ ಉತ್ಕೃಷ್ಟ ಸೇವೆ ನೀಡುವುದು ಎರಡು ಹರಮ್ ಗಳ ಕಾರ್ಯಾಲಯದ ಉದ್ದೇಶವಾಗಿದೆ ಎಂದು ವರದಿಯಾಗಿದೆ.
Next Story





