ತುಪಾಕಿ-2ನಲ್ಲಿ ವಿಜಯ್,ಮುರುಗದಾಸ್ ಜೋಡಿ
‘ಗಝನಿ’ ಖ್ಯಾತಿಯ ಎ.ಆರ್. ಮುರುಗದಾಸ್, ತುಪಾಕಿ ಯಲ್ಲೂ ತನ್ನ ನಿರ್ದೇಶನದ ವರಸೆ ಯನ್ನು ಪ್ರದರ್ಶಿಸಿ ಚಿತ್ರರಸಿಕರನ್ನು ಬೆರಗುಗೊಳಿಸಿದ್ದರು. ಇದೀಗ ವಿಜಯ್ ಅಭಿನಯದ ಇನ್ನೊಂದು ಚಿತ್ರವನ್ನು ನಿರ್ದೇಶಿಸಲು ಅವರು ಸಜ್ಜಾಗುತ್ತಿದ್ದಾರೆ. ಅಂದಹಾಗೆ ಇದು ‘ತುಪಾಕಿ’ ಚಿತ್ರದ ಮುಂದುವರಿದ ಭಾಗವಂತೆ. ಇಷ್ಟಕ್ಕಂತೂ ವಿಜಯ್, ಮುರುಗದಾಸ್ ನಿರ್ದೇಶನದ ಸೂಪರ್ಹಿಟ್ ಚಿತ್ರಗಳಾದ ‘ತುಪಾಕಿ’, ‘ಕತ್ತಿ’ಗೆ ನಾಯಕರಾಗಿದ್ದರು.
ಈ ಎರಡೂ ಚಿತ್ರಗಳ ಯಶಸ್ಸಿನ ಬಳಿಕ ವಿಜಯ್ ಮುರುಗದಾಸ್ ಕಾಂಬಿನೇಶನ್ ಚಿತ್ರಕ್ಕೆ ಯಶಸ್ಸು ಕಟ್ಟಿಟ್ಟ ಬುಟ್ಟಿ ಎಂಬ ನಂಬಿಕೆ ತಮಿಳುಚಿತ್ರರಂಗದಲ್ಲಿ ಮೂಡಿದೆ. ಇದೀಗ ವಿಜಯ್ ಮತ್ತು ಮುರುಗದಾಸ್ ಜೊತೆಯಾಗಲಿರುವ ‘ತುಪಾಕಿ 2’ ಬಗ್ಗೆ ಭಾರೀ ನಿರೀಕ್ಷೆಗಳು ಗರಿಗೆದರಿವೆ.
ಸದ್ಯಕ್ಕೆ ವಿಜಯ್ ಅವರು ಅ್ಯಟ್ಲಿ ಕುಮಾರ್ ನಿರ್ದೇಶನದ ‘ವಿಜಯ್ 61’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪೂರ್ಣಗೊಂಡ ಬೆನ್ನಿಗೇ ವಿಜಯ್, ಮುರುಗದಾಸ್ ರ ಚಿತ್ರಕ್ಕೆ ಮೇಕಪ್ ಹಚ್ಚಲಿದ್ದಾರೆ.
ಇನ್ನೊಂದೆಡೆ ಮುರುಗದಾಸ್ದಾಸ್ ತೆಲುಗು,ತಮಿಳಿನಲ್ಲಿ ಏಕಕಾಲಕ್ಕೆ ತವಿಜಯ್ ತ್ತಿರುವ, ‘ಪ್ರಿನ್ಸ್’ ಮಹೇಶ್ಬಾಬು ನಟನೆಯ ಚಿತ್ರದಲ್ಲಿ ಮಗ್ನರಾಗಿದ್ದಾರೆ. ಏನೇ ಇದ್ದರೂ, 2018ರಲ್ಲಿ ‘ತುಪಾಕಿ 2’ ತೆರೆಕಾಣುವುದಂತೂ ಖಂಡಿತ.