ಶಿರಾಡಿ ಘಾಟ್‌ನಲ್ಲಿ ಹೊತ್ತಿ ಉರಿದ ಬಸ್

ಸಕಲೇಶಪುರ, ಎ.1: ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ಬೆಂಕಿಗೆ ಆಹುತಿಯಾದ ಘಟನೆ ಶಿರಾಡಿ ಘಾಟ್ ಸಮೀಪ ಮಧ್ಯಾಹ್ನ ನಡೆದಿದೆ.
ಮಂಗಳೂರಿನಿಂದ ಹಾಸನ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದ್ದು ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.
ಬೆಂಕಿಯನ್ನು ಕಂಡ ಬಸ್ ಚಾಲಕ ವಾಹನವನ್ನು ನಿಲ್ಲಿಸಿ ಪ್ರಯಾಣಿಕರ ನ್ನು ಬಸ್ಸಿನಿಂದ ಕೆಳಗಿಳಿಸಿದ್ದಾನೆ ನೋಡು ನೋಡುತ್ತಿದ್ದಂತೆ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಮನೆ ನೀರು ಹಾಗೂ ಮೊಬೈಲ್ ಸಂಪರ್ಕಕ್ಕೆ ಸಿಗದಕಾರಣ ಅಗ್ನಿಶಾಮಕ ವಾಹನ ತಡವಾಗಿ ಬಂದಿದ್ದು ಅಷ್ಟರಲ್ಲಿ ವಾಹನ ಬೆಂಕಿಗೆ ಆಹುತಿಯಾಗಿತ್ತು. ಎಂದು ತಿಳಿದು ಬಂದಿದೆ.
Next Story





