Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈಯಲ್ಲಿ ದಾರುನ್ನೂರ್ ಅಲ್ ನಕೀಲ್...

ದುಬೈಯಲ್ಲಿ ದಾರುನ್ನೂರ್ ಅಲ್ ನಕೀಲ್ ಶಾಖೆಯ ಪುನರ್ ರಚನೆ

ಬದ್ರುದ್ದೀನ್ ಹೆಂತಾರ್ಬದ್ರುದ್ದೀನ್ ಹೆಂತಾರ್1 April 2017 11:21 PM IST
share
ದುಬೈಯಲ್ಲಿ ದಾರುನ್ನೂರ್ ಅಲ್ ನಕೀಲ್ ಶಾಖೆಯ ಪುನರ್ ರಚನೆ

ದುಬೈ, ಎ.1: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡಬಿದ್ರಿ ಇದರ ಆಧೀನದಲ್ಲಿ ಕಾರ್ಯಾಚರಿಸುತ್ತಿರುವ  ಯುಎಇ ಕಲ್ಚರಲ್ ಸೆಂಟರ್ ಇದರ ಶಾಖೆಗಳಲ್ಲೊಂದಾದ ಅಲ್ ನಕೀಲ್ ಶಾಖೆಯ ಪುನರ್ ರಚನೆ ಮಾ.30 ಗುರುವಾರ ದೇರಾ ದುಬೈಯಲ್ಲಿರುವ ಒಜೀನ್ ರೆಸ್ಟೋರೆಂಟ್ ನಲ್ಲಿ ಅನ್ವರ್ ಮನಾಲ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಅಬೂಬಕ್ಕರ್ ಹಾಜಿಯವರ ದುಆದ ಬಳಿಕ ಸ್ವಾಗತ ಭಾಷಣವನ್ನು ಕಾರ್ಯದರ್ಶಿ ಜಾಬಿರ್ ಬೆಟ್ಟಂಪಾಡಿ ನೆರವೇರಿಸಿದರು. ಈ ಸಂದರ್ಭ ಕರಾವಳಿಯಲ್ಲಿ ನಡೆಯುತ್ತಿರುವ ವಿದ್ಯಾಭ್ಯಾಸ ಕ್ರಾಂತಿಯ ಬಗ್ಗೆ ವಿವರಿಸಿ ಮಾತನಾಡಿದರು.

ದಾರುನ್ನೂರ್ ಯುಎಇ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಳಿಗೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಯುಎಇಯಲ್ಲಿ ದಾರುನ್ನೂರಿನ ಕಾರ್ಯವೈಖರಿಯನ್ನು ವಿವರಿಸಿ ಹೇಳಿದರು .

ಪ್ರಧಾನ ಕಾರ್ಯದರ್ಶಿ ನಾಸಿರ್ ಮಂಗಿಲ ಪದವು ಊರಿಗೆ ತೆರಳಿದ್ದು ಅವರ ಅನುಪಸ್ಥಿತಿಯಲ್ಲಿ ಕಳೆದ ವರ್ಷಗಳ ಸಾಧನೆಯ ವರದಿಯನ್ನು ಸಂಘಟನಾ ಕಾರ್ಯದರ್ಶಿ  ಹಮೀದ್ ಮನಿಲರವರು ನೀಡುತ್ತಾ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿದರು.

ಗೌರವಾಧ್ಯಕ್ಷರಾದ ನೂರ್ ಮಹಮ್ಮದ್ ನೀರ್ಕಜೆಯವರು ಯುಎಇಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳು ವಿದ್ಯಾಭ್ಯಾಸವನ್ನು ಧ್ಯೇಯವಾಗಿಟ್ಟು ಮುಂದುವರಿಯುತ್ತಿದ್ದು ಎಲ್ಲವೂ ಸಮುದಾಯದ ಒಳಿತಿಗಾಗಿ ಮಾತ್ರ ಕಾರ್ಯವೆಸಗುತ್ತಿದೆ ಎಂದು ಹೇಳುತ್ತಾ ದಾರುನ್ನೂರ್ ಒಂದು ವಿಶ್ವ ವಿದ್ಯಾಲಯವಾಗಲಿದ್ದು ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ವಿವರಿಸಿ ಮಾತನಾಡಿದರು.

ಅಧ್ಯಕ್ಷ ಅನ್ವರ್ ಮನಾಲ ಮಾತನಾಡಿ, ದಾರುನ್ನೂರ್ ಇದರ ಕಾರ್ಯಕ್ಷೇತ್ರ ಮತ್ತು ವ್ಯಾಪ್ತಿ ತುಂಬಾ ದೊಡ್ಡದಾಗಿದ್ದು ಭವಿಷ್ಯದಲ್ಲಿ ನಮ್ಮ ಸಮುದಾಯವನ್ನು  ಶಿಕ್ಷಣ ರಂಗದಲ್ಲಿ ಮೇಲೆಕ್ಕೆತ್ತಲು ಯೋಗ್ಯ ತಾಣವಾಗಿದೆ. ಕಾಶಿಪಟ್ನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಾರುನ್ನೂರ್ ವಿದ್ಯಾಸಂಸ್ಥೆ ಎಂದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿ ಹಾಲಿ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿ ಕೊಟ್ಟರು.

ನೂತನ ಸಮಿತಿ ರಚನೆಯ ಜವಾಬ್ದಾರಿ ದಾರುನ್ನೂರ್ ಯುಎಇ ಇದರ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಗೆ ಒಪ್ಪಿಸಲಾಯಿತು. ಈ ಸಂದರ್ಭ ದಾರುನ್ನೂರ್ ಇದರ ಪ್ರಸಕ್ತ ಸನ್ನಿವೇಶವನ್ನು ವಿವರಿಸಿದರು. ಮಸ್ಜಿದ್ ಬಹ್ರ್ ಅನ್ನೂರ್ ಉದ್ಘಾಟನೆಗೊಂಡಿದ್ದು  ಮುಂದಿನ ಗುರಿ ವನಿತಾ ವಿದ್ಯಾಲಯದ ನಿರ್ಮಾಣವಾಗಿದ್ದು ಸದ್ಯವೇ ಕಾಮಗಾರಿ ಪ್ರಾರಂಭಿಸುವ ಯೋಜನೆಯ ಬಗ್ಗೆ ತಿಳಿಸಿದರು.

2017-18 ಸಾಲಿಗೆ ಈ ಕೆಳಗಿನವ ಪ್ರಮುಖರನ್ನು ನಕೀಲ್ ಶಾಖೆಯ ಪ್ರತಿನಿಧಿಗಳಾಗಿ ಆರಿಸಲಾಯಿತು:

ಗೌರವಾಧ್ಯಕ್ಷ: ಅಬೂಬಕ್ಕರ್ ಹಾಜಿ ಪೊನ್ನಾಣಿ, ಅಧ್ಯಕ್ಷ: ಹಮೀದ್ ಮನಿಲ, ಉಪಾಧ್ಯಕ್ಷ: ಸಿದ್ದೀಕ್ ಹಾಜಿ ತ್ರಿಶೂರ್, ಮುಸ್ತಫಾ ಉಜಿರೆ, ಪ್ರಧಾನ ಕಾರ್ಯದರ್ಶಿ: ಸಿದ್ದೀಕ್ ಪಾಣೆಮಂಗಳೂರು, ಕಾರ್ಯದರ್ಶಿ: ಮುಸ್ತಫಾ ಕಕ್ಕಿಂಜೆ, ಜಾಬಿರ್ ಬೆಟ್ಟಂಪಾಡಿ, ಕೋಶಾಧಿಕಾರಿ: ಅನ್ವರ್ ಮನಾಲ, ಸಂಘಟನಾ ಕಾರ್ಯದರ್ಶಿ: ನೂರ್ ಮಹಮ್ಮದ್ ನೀರ್ಕಜೆ, ಕನ್ವೀನರ್: ಜಿ.ಬಿ ಅಬ್ದುಲ್ಲಾ ಬೆರಿಂಜ, ಝಕರಿಯಾ ಮುಲಾರ್, ಹಿದಾಯತ್ ಪಾಣೆಮಂಗಳೂರು,  ಶಾಫಿ ಸುಳ್ಯ ( ತಾಜ್ ), ಹಮೀದ್ ಮುಸ್ಲಿಯಾರ್ ನೀರ್ಕಜೆ

ಕಾರ್ಯಕಾರಿ ಸಮಿತಿ ಸದಸ್ಯರು : 

 ಕಬೀರ್ ಕಣ್ಣೂರ್, ಶಫೀಕ್ ಕೈಕಂಬ, ಮಹಮ್ಮದ್ ನಯೀಮ್ ಚೆನ್ನೈ, ಇಸ್ಹಾಕ್ ಸಾಲೆತ್ತೂರ್, ಜಲೀಲ್ ವಿಟ್ಲ, ಸಮೀರ್ ವಡಗರ, ಅಬ್ದುಲ್ಲಾ ಪುತ್ತೂರು, ಕಬೀರ್ ನೆಲ್ಯಾಡಿ,  ರಫೀಕ್ ಸಂಪ್ಯ, ಶಾಕಿರ್ ಕಂಬ್ಲಬೆಟ್ಟು,  ಮನ್ಸೂರ್ ಬೆಲ್ಮ, ಇಸ್ಹಾಕ್ ಉಜಿರೆ,  ರಾಝಿಕ್ ಸವಣೂರ್, ಅಲ್ತಾಫ್ ಕೌಡಿಚ್ಚಾರ್, ಅಶ್ರಫ್ ಮುಲಾರ್, ರಫೀಕ್ ಮೂಡಾಯಿಬೆಟ್ಟು, ಮುನೀರ್ ಮೂಡಾಯಿಬೆಟ್ಟು , ನಿಝಾರ್ ಕೋಝಿ ಕೋಡ್, ಸಿದ್ದೀಕ್ ಕಾರಾಜೆ, ಮಹಮ್ಮದ್ ಮುಸ್ತಫಾ ವಾಮದ ಪದವು ಬಂಟ್ವಾಳ, ಮೊದಲಾದವರನ್ನು ಆರಿಸಲಾಯಿತು.

ಬಳಿಕ ದಾರುನ್ನೂರ್ ಯುಎಇ ಉಪಾಧ್ಯಕ್ಷರಾದ ಮಹಮ್ಮದ್ ರಫೀಕ್ ಆತೂರ್, ನವಾಝ್ ಬಿ.ಸಿ ರೋಡ್ ಮತ್ತು ರಾಷ್ಟ್ರೀಯ ಸಮಿತಿಯ ಪ್ರಮುಖ ಮುಸ್ತಫಾ ಗೂನಡ್ಕ ಮೊದಲಾದವರು ನೂತನ ಸಮಿತಿಗೆ ಶುಭ ಹಾರೈಸಿ ಸಾಂದರ್ಭಿಕವಾಗಿ ಮಾತನಾಡಿದರು.

ನೂತನ ಅಧ್ಯಕ್ಷ ಹಮೀದ್ ಮನಿಲ ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪಾಣೆಮಂಗಳೂರು,  ದಾರುನ್ನೂರನ್ನು ತಮ್ಮ ಕಾಲಾವಧಿಯಲ್ಲಿ ನಕೀಲ್ ಪ್ರದೇಶದಲ್ಲಿ ದಾರುನ್ನೂರನ್ನು  ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ತಿಳಿಸಿದರು.  ಮುಸ್ತಫಾ ಕಕ್ಕಿಂಜೆಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

                    

share
ಬದ್ರುದ್ದೀನ್ ಹೆಂತಾರ್
ಬದ್ರುದ್ದೀನ್ ಹೆಂತಾರ್
Next Story
X