Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮುಜ್ರಿಮ್ ಹಾಜಿರ್: ಅಭಿವೃದ್ಧಿ ಮತ್ತು...

ಮುಜ್ರಿಮ್ ಹಾಜಿರ್: ಅಭಿವೃದ್ಧಿ ಮತ್ತು ನೈತಿಕ ಮೌಲ್ಯಗಳ ಸಂಘರ್ಷ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ1 April 2017 11:58 PM IST
share
ಮುಜ್ರಿಮ್ ಹಾಜಿರ್: ಅಭಿವೃದ್ಧಿ ಮತ್ತು ನೈತಿಕ ಮೌಲ್ಯಗಳ ಸಂಘರ್ಷ

60-70ರ ದಶಕದಲ್ಲಿ ಬಂಗಾಳಿ ಸಾಹಿತ್ಯ ದೇಶಾದ್ಯಂತ ಬೀರಿದ ಪ್ರಭಾವಕ್ಕೆ ಎಲ್ಲ ವರ್ಗದ ಓದುಗರೂ, ಸಾಹಿತಿಗಳೂ ಒಳಗಾಗಿದ್ದರು. ಕನ್ನಡದಲ್ಲಿ ಪ್ರಗತಿಶೀಲ ಬರಹಗಾರರಲ್ಲಿ ಬಹುತೇಕರು ಬಂಗಾಳಿಯ ಶರತ್‌ಚಂದ್ರ ಚಟರ್ಜಿಯೂ ಸೇರಿದಂತೆ ಹಲವು ಲೇಖಕರ ಅನುಕರಣೆಗೆ ಸಿಲುಕಿದ್ದಾರೆ. ಕನ್ನಡದ ಐತಿಹಾಸಿಕ ಕಾದಂಬರಿಗಳ ಪರಂಪರೆ ಯಥಾವತ್ ಬಂಗಾಳಿ ಲೇಖಕರನ್ನೇ ಅನುಕರಿಸಿತ್ತು. ಶರತ್‌ಚಂದ್ರ, ತಾರಾಶಂಕರ ಬಂದೋಪಾಧ್ಯಾಯ, ಬಿಭೂತಿ ಭೂಷಣ್, ಮಾಣಿಕ್ ಬಂದೋಪಾಧ್ಯಾಯ ಮೊದಲಾದ ಬರಹಗಾರರು ಭಾರತೀಯ ಸಿನೆಮಾಗಳ ಮೇಲೂ ಪ್ರಭಾವ ಬೀರಿದ್ದರು ಎನ್ನುವುದನ್ನೂ ಗಮನಿಸಬೇಕಾಗಿದೆ. ಬಂಗಾಳದ ವಿಶ್ವವಿಖ್ಯಾತ ನಿರ್ದೇಶಕರಾಗಿರುವ ಸತ್ಯಜಿತ್ ರೇ ಕೂಡ ಆ ಪ್ರಭಾವಕ್ಕೆ ಸಿಲುಕಿದ್ದರು. ಆನಂತರದ ದಿನಗಳಲ್ಲಿ ಬಂದ ಹುಮಾಯೂನ್ ಅಹಮದ್ ಸುನೀಲ್ ಬಂದೋಪಾಧ್ಯಾಯ ಮೊದಲಾದ ಬಂಗಾಳಿ ಭಾಷೆಯ ಜನಪ್ರಿಯ ಕಾದಂಬರಿಕಾರರು ಭಾರತೀಯ ಕಾದಂಬರಿಗಳಿಗೊಂದು ಜನಪ್ರಿಯ ಮಾರ್ಗವನ್ನು ತೋರಿಸಿಕೊಟ್ಟರು. ಇವರ ಸಾಲಿನಲ್ಲೇ ಬಂದವರು ಬಿಮಲ ಮಿತ್ರ. ನೂರಕ್ಕಿಂತಲೂ ಹೆಚ್ಚು ಕಾದಂಬರಿಗಳನ್ನು ಬರೆದು ಹಲವು ಭಾಷೆಗಳಿಂದ ಓದುಗರನ್ನು ತನ್ನದಾಗಿಸಿಕೊಂಡವರು.

‘ಮುಜ್ರಿಮ್ ಹಾಜಿರ್’ ಸುಮಾರು 800 ಪುಟಗಳ ಬೃಹತ್ ಕಾದಂಬರಿ. ದೇಶವಿದೇಶಗಳ ಹಲವು ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಯನ್ನು ಕನ್ನಡಕ್ಕಿಳಿಸಿದವರು ಎಸ್. ಕೆ. ರಮಾದೇವಮ್ಮ. 70ರ ದಶಕದ ಜನಪ್ರಿಯ ಮಾರ್ಗದಲ್ಲೇ ಮೂಡಿಬಂದಿರುವ ಕಾದಂಬರಿ ಇದಾಗಿದ್ದರೂ, ನೈತಿಕ ವೌಲ್ಯಗಳನ್ನು ಎತ್ತಿ ಹಿಡಿಯುವ ತನ್ನ ಉದ್ದೇಶಗಳ ಮೂಲಕ ಅದರಾಚೆಗೂ ಕಾದಂಬರಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಅಪರಾಧ ಪ್ರಜ್ಞೆಯನ್ನು ಹೊಂದಿದ ಕಥಾನಾಯಕನ ಒಳಸಂಘರ್ಷಗಳನ್ನು ತೆರೆದಿಡುವ ಕೃತಿ, ಮನುಷ್ಯ, ಅಭಿವೃದ್ಧಿ ಮತ್ತು ನೈತಿಕತೆಯ ಮೂರು ನೆಲೆಗಳನ್ನು ಚರ್ಚಿಸುತ್ತದೆ. ಬೃಹತ್ ಕಾದಂಬರಿ ಇದಾಗಿರುವುದರಿಂದ, ಆ ಕಾಲಘಟ್ಟದ ಸಾಮಾಜಿಕ ವಿವರಗಳು ದಟ್ಟವಾಗಿ ಹರಡಿಕೊಂಡಿವೆ. ಸರಳ ಅನುವಾದ ಕೃತಿಯನ್ನು ಓದುಗರಿಗೆ ಆತ್ಮೀಯವಾಗಿಸಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿ ರುವ ಈ ಕೃತಿಯ ಮುಖಬೆಲೆ 400 ರೂ.

share
ಕಾರುಣ್ಯಾ
ಕಾರುಣ್ಯಾ
Next Story
X