ವಿಕಾಸ್ ಕಾಲೇಜಿನ ನಾಲ್ವರು ಉತ್ತೀರ್ಣ
ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ ಪರೀಕ್ಷೆ

ಮಂಗಳೂರು, ಎ.1: ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ (ಕೆವಿಪಿವೈ) ಲಿಖಿತ ಪರೀಕ್ಷೆಯು ಕಳೆದ ನ.6ರಂದು ನಡೆದಿತ್ತು. ಅದರ ಅಂಗವಾಗಿ ಜನವರಿಯಲ್ಲಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಕಾಸ್ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಮೂಲಕ ಸಂಸ್ಥೆಗೆ ಇನ್ನೊಂದು ಗರಿಯನ್ನು ಸೇರಿಸಿದ್ದಾರೆ.
ಇದರೊಂದಿಗೆ ವಿದ್ಯಾರ್ಥಿಗಳು ಪ್ರತಿಷ್ಠಿತ ಐಐಎ್ಇಆರ್‌ಎಸ್ ಹಾಗೂ ಐಐಎಸ್‌ಸಿ, ಟೈಮ್ಸ್ಹೈಯರ್ ಎಜುಕೇಶನ್ ಶ್ರೇಣಿಯಲ್ಲಿ ಪ್ರಪಂಚದ ಕಿರಿಯ ವಿವಿಗಳಲ್ಲಿ 8ನೆ ಸ್ಥಾನವನ್ನು ಪಡೆದಿರುವ ಸಂಸ್ಥೆಯಲ್ಲಿ ಪ್ರವೇಾತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಆಯ್ಕೆಯಾದ ವಿದ್ಯಾರ್ಥಿಗಳು: ಹರ್ಷವರ್ಧನ-ಅಖಿಲಭಾರತ ಶ್ರೇಣಿ 121 ಎಸ್‌ಸಿ, ಶ್ರೋಫ್ ಸಿ. ಪ್ರಜ್ವಲ್-ಅಖಿಲಭಾರತ ಶ್ರೇಣಿ 634, ಶಾಲಿನಿ ಬಿ.ಎಂ.-ಅಖಿಲಭಾರತ ಶ್ರೇಣಿ 888, ರಘುನಂದನ ಬಿ.ಎಂ.- ಅಖಿಲಭಾರತ ಶ್ರೇಣಿ 1,296.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಅಭಿನಂದನೆ ಸಲ್ಲಿಸಿದೆ.





