ಮಣಿಪಾಲ: ಇಂದು ಗಾಳಿಪಟ ಹಾರಿಸುವ ಕಾರ್ಯಕ್ರಮ
ಮಣಿಪಾಲ, ಎ.1: ವಿಶ್ವ ಆಟಿಸಂ ಅರಿವು ದಿನಾಚರಣೆಯ ಅಂಗವಾಗಿ ಮಣಿಪಾಲ ವಿವಿಯ ವಿಎಸ್‌ಒ ಸಂಸ್ಥೆಯು ವಾರ್ಷಿಕ ಗಾಳಿಪಟ ಹಾರಿಸುವ ಕಾರ್ಯಕ್ರಮ ‘ತರಂಗ’ವನ್ನು ಎ.2ರಂದು ಸಂಜೆ ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿ ಆಯೋಜಿಸಿದೆ. ಮಣಿಪಾಲ ಎಂಐಟಿಯ ವಜ್ರಮಹೋತ್ಸವದ ಅಂಗವಾಗಿ ಆಟಿಸಂ ಕುರಿತಂತೆ ಸಮಾಜಕ್ಕೆ ಅರಿವು ಮೂಡಿಸುವ ಉದ್ದೇಶವನ್ನು ಸಂಘಟನೆ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.
Next Story





